ನವದೆಹಲಿ:– ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರು ಕಳ್ಳತನವಾಗಿದೆ. ಮಲ್ಲಿಕಾ ನಡ್ಡಾ ಅವರ ಫಾರ್ಚುನರ್ ಕಾರು ಕಳ್ಳತನ ನಡೆದಿದೆ ಎನ್ನಲಾಗಿದೆ.
ಮಾರ್ಚ್ 19 ರಂದು, ಅವರ ಕಾರನ್ನು ಸರ್ವೀಸ್ ಸೆಂಟರ್ನಿಂದಲೇ ಕಳವು ಮಾಡಲಾಗಿತ್ತು. ಚಾಲಕನ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಇದೀಗ ಪೊಲೀಸರು ಕಾರಿಗೆ ಹುಡುಕಾಟ ಆರಂಭಿಸಿದ್ದಾರೆ.
ಈ ಸಂಬಂಧ ಪೊಲೀಸರು ಸಮೀಪದ ಸಿಸಿಟಿವಿ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಶಂಕಿತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಅರೋರಾ ಪ್ರಾಪರ್ಟೀಸ್ ಆರ್ಡಿ ಮಾರ್ಗದ ಮುಂಭಾಗದಲ್ಲಿರುವ ಗೋವಿಂದಪುರಿಯಿಂದ ಕಾರು ನೋಂದಣಿ ಸಂಖ್ಯೆ ಅನ್ನು ಕಳವು ಮಾಡಲಾಗಿದೆ ಎಂದು ಚಾಲಕ ಹೇಳಿದ್ದಾರೆ
ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯೊಳಗೆ ಕಾರು ಕಳ್ಳತನವಾಗಿರುವ ಸಾಧ್ಯತೆ ಇದೆ ಎಂದು ಚಾಲಕ ತಿಳಿಸಿದ್ದಾರೆ.