ಭಾರತೀಯ ಮೂಲದ ಡೆಲಿವರಿ ಡ್ರೈವರ್ ನ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬ್ರಿಟನ್ ಕೋರ್ಟ್ ಇದೀಗ ಭಾರತ ಮೂಲದ ನಾಲ್ವರಿಗೆ 122 ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿಗಳಾದ ಅರ್ಶದೀಪ್ ಸಿಂಗ್, ಜಗದೀಪ್ ಸಿಂಗ್, ಶಿವದೀಪ್ ಸಿಂಗ್ರ , ಮನ್ಜೋತ್ ಸಿಂಗ್ಗೆ ತಲಾ ಕನಿಷ್ಠ 28 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಔರ್ಮನ್ ಸಿಂಗ್ ಎಂಬ ಚಾಲಕನನ್ನು ಪಶ್ಚಿಮ ಇಂಗ್ಲೆಂಡ್ನಲ್ಲಿ ಹತ್ಯೆ ಮಾಡಲಾಗಿತ್ತು. ಕೊಡಲಿ, ಹಾಕಿ ಸ್ಟಿಕ್ ಸೇರಿದಂತೆ ಅಪಾಯಕಾರಿ ಶಸ್ತ್ರಗಳನ್ನು ಬಳಸಿ ಡ್ರೈವರ್ ನನ್ನು ದಾರುಣವಾಗಿ ಕೊಂದಿದ್ದರು. ವಿಚಾರಣೆ ನಡೆಸಿದ ಬ್ರಿಟನ್ ಕೋರ್ಟ್ ಅಪರಾಧ ಸಾಭಿತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ವಿಧಿಸಿದೆ.