ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಾಂಸಾಹಾರ ಸೇವೆಯ ಬಳಿಕ ಒಂದೇ ಕುಟುಂಬದ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಇನ್ನೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ. 60 ವರ್ಷದ ಭೀಮಣ್ಣ, 57 ವರ್ಷದ ಈರಮ್ಮ, 21 ವರ್ಷದ ಮಲ್ಲೇಶ, 19 ವರ್ಷದ ಪಾರ್ವತಿ ಮೃತ ದುರ್ದೈವಿಗಳು.
ಇನ್ನೋರ್ವ ಮಗಳು ಮಲ್ಲಮ್ಮ ಸ್ಥಿತಿ ಗಂಭೀರವಾಗಿದ್ದು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಿನ್ನೆ ಬೆಳಿಗ್ಗೆ ಮಟನ್, ಚಪಾತಿ ಊಟ ಮಾಡಿ ಜಮೀನು ಕೆಲಸಕ್ಕೆ ತೆರಳಿದ್ದವರಿಗೆ ವಾಂತಿಯಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನ ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಿಮ್ಸ್ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಹಾಗೂ ಜಿಲ್ಲಾಧಿಕಾರಿ ನಿತೀಶ್ ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಿಮ್ಸ್ ಡೀನ್ ರಮೇಶ್ ರಿಂದ ಸಾವಿನ ಕುರಿತು ಮಾಹಿತಿ ಪಡೆದಿದ್ದಾರೆ. ಆದ್ರೆ ನಾಲ್ವರ ಸಾವಿಗೆ ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ
ಆದ್ರೆ ಪ್ರಾಥಮಿಕ ವರದಿಯಲ್ಲಿ ಫುಡ್ ಪಾಯಿಸನ್ ಅಂತ ಮಾಹಿತಿ ತಿಳಿದುಬಂದಿದೆ ಅಂತ ಎಸ್ ಪಿ ಪುಟ್ಟಮಾದಯ್ಯ ಹೇಳಿದ್ದಾರೆ. ಮೃತ ಕುಟುಂಬ ಆತ್ಮಹತ್ಯೆಗೆ ಯತ್ನಿಸಿಲ್ಲ ಆಹಾರದಲ್ಲೇ ವ್ಯತ್ಯಾಸವಾಗಿದೆ ಅಂತ ಕುಟುಂಬದ ಆಪ್ತರು ತಿಳಿಸಿದ್ದಾರೆ.