ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರ ನಿರ್ಮಾಪಕರ ಬ್ಯಾಂಕ್ ಎಂದರೆ ತಪ್ಪಾಗಲಾರದು ಹಾಗೆ ಅವರ ಸಿನಿಮಾಕ್ಕೆ ಹಾಕಿದ ಬಂಡವಾಳಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಚಾರ ಆದರೆ ಈಗ ಅದೇ ನಿರ್ಮಾಪಕರಿಂದಲೆ ಕಿಚ್ಚನ ಮೇಲೆ ಆರೋಪಗಳು ಕೇಳಿಬರುತ್ತಿವೆ ಏನಂತೀರಾ ನೋಡೋಣ ಬನ್ನಿ..
ಕಿಚ್ಚ ಸುದೀಪ್ ಅವರು ನಮಗೆ ತಮ್ಮ ನಟನೆಯ ಸಿನಿಮಾ ಮಾಡಲು ದಿನಾಂಕಗಳನ್ನು ನೀಡುತ್ತಿಲ್ಲ ನಾಳೆ ನಾಡಿದ್ದು ಮುಂದಿನ ತಿಂಗಳು ಎಂದು ದಿನಗಳನ್ನು ತಳ್ಳುತಿದ್ದಾರೆ. ಮೊದಲೆಲ್ಲ ಅವರ ಸಿನಿಮಾಕ್ಕೆ ನಾವೇ ಬಂಡವಾಳ ಹಾಕಿದ್ದೇವೆ ಆದರೆ ಈಗ ಅವೇ ನಮಗೆ ದಿನಾಂಕಗಳನ್ನು ನೀಡದೆ ಸತಾಯಿಸುತಿದ್ದಾರೆ ಎಂದು ನಿರ್ಮಾಪಕರಾದ ಎಂ ಎನ್ ಕುಮಾರ್ ಮತ್ತು ಸಿ ವಿ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್ ರವರು ವಕೀಲರ ಮೂಲಕ ಇಬ್ಬರು ನಿರ್ಮಾಪಕರಿಗೆ ಕೋರ್ಟ್ ಮೂಲಕ ನೋಟಿಸ್ ನಿಡಿದ್ದಾರೆ. ನನ್ನ ವಿರುದ್ದ ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆಯ ವಿರುದ್ದ ದೂರನ್ನು ದಾಖಲಿಸಿ ನಿರ್ಮಾಪಕರಿಗೆ 10 ಕೋಟಿ ಮಾನನಷ್ಟ ನೀಡುವುದಾಗಿ ಬೇಡಿಕೆ ಇಟ್ಟಿದ್ದಾರೆ.