ಬೆಂಗಳೂರು: ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 39ನೇ ಎ.ಸಿ.ಎಮ್.ಎಮ್ ಕೋರ್ಟ್ ಆದೇಶ ಹೊರಡಿಸಿದೆ.
ಸ್ಯಾಂಡಲ್ವುಡ್ ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರು ಬಳಸಿ ಮಹಿಳೆಯೊಬ್ಬಳು ವಂಚನೆ ಮಾಡಿರುವ ಆರೋಪದ ಮೇಲೆ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಯಶಸ್ವಿನಿ ಜೊತೆ ಮೋಸ ಹೋಗಿರುವ ಇತರರಿಂದ ನಿಶಾ ವಿರುದ್ಧ ದೂರು ದಾಖಲಿಸಲಾಗಿತ್ತು. ಆರೋಪಿ ನಿಶಾರನ್ನ ಪೊಲೀಸರು ಬಂಧಿಸಿದ್ದರು.
ಮಕ್ಕಳ ಟ್ಯಾಲೆಂಟ್ ಶೋ, ಮಕ್ಕಳ ಮಾಡೆಲಿಂಗ್, ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ರೂ. ಹಣವನ್ನು ನಿಶಾ ನಂಬಿಸಿ ದೋಚಿದ್ದಾರೆ ಎನ್ನಲಾಗುತ್ತಿದೆ. ಸಾಕಷ್ಟು ಜನರಿಂದ ಹಣ ಪಡೆದು ಮೋಸ ಹೋದ ಕೆಲವರು ನಿಶಾರ ವಿರುದ್ಧ ದೂರು ನೀಡುವ ಮೂಲಕ ಕಿಡಿಕಾರಿದ್ದಾರೆ. ಹೀಗಿರುವಾಗ ಈ ನಡುವೆ ಮಾಸ್ಟರ್ ಆನಂದ್ರ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಹಲವರಿಗೆ ಮೋಸ ಮಾಡಿದ್ದಾರಂತೆ ನಿಶಾ ನರಸಪ್ಪ. ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಮಾರು 40 ಲಕ್ಷ ರೂ. ಹಣವನ್ನು ಪಡೆದು ಮೋಸ ಮಾಡಿದ್ದಾರೆಂದು ವರದಿಯಾಗಿದೆ.