ಬೆಂಗಳೂರು (ಆನೇಕಲ್): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರು ಬಳಸಿಕೊಂಡು ಬ್ಯಾಂಕ್ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬಳು ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿನ ಆನೇಕಲ್, ಚಂದಾಪುರ, ಸೂರ್ಯ ನಗರ ,ಹೊಸಕೋಟೆ ಅತ್ತಿಬೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡಿರುವ ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಆ್ಯಂಡ್ ಗ್ಯಾಂಗ್ ವಿರುದ್ಧ ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಾಗಿದೆ.
ಈಕೆಯೇ ನೋಡಿ ಆ ಮಹಾ ವಂಚಕಿ ಪವಿತ್ರ ಸ್ವತಹ ತಮಿಳುನಾಡಿನ ಹೊಸೂರು ಮೂಲದವಳು ಅಮಾಯಕರನ್ನು ವಂಚಿಸುವುದೇ ಈ ಮಹಿಳೆಯ ಕಾಯಕ ಹಣದ ಆಸೆ ತೋರಿಸಿ ಕೋಟಿ ಕೋಟಿ ವಂಚಿಸಿರುವ ನಯ ವಂಚಕಿ ಆನೇಕಲ್, ಚಂದಾಪುರ, ಸೂರ್ಯ ನಗರ ,ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ಪ್ರಕರಣ ಬೆಳಕಿಗೆ…
ನಾವು ಹೊಸೂರಿನಲ್ಲಿ ಟ್ರಸ್ಟ್ ಓಪನ್ ಮಾಡಿದ್ದೇವೆ ನಮ್ಮ ಟ್ರಸ್ಟ್ ಗೆ ಕೇಂದ್ರ ಸರ್ಕಾರದಿಂದ ಹಣ ಬಂದಿದೆ ಅಮೆರಿಕದಿಂದಲೇ ನಮ್ಮ ಟ್ರಸ್ಟ್ ಗೆ ಹಣ ಸಂದಾಯ ಆಗಿದೆ ಆ ಹಣವನ್ನು ನಾವು ಲೋನ್ ಮೂಲಕ ನಿಮಗೆ ಕೊಡುತ್ತೇವೆ 10 ಲಕ್ಷ ಕೊಟ್ರೇ 5 ಲಕ್ಷ ಮಾತ್ರ ವಾಪಸ್ ಕಟ್ಟಬೇಕು 5 ಲಕ್ಷ ನಿಮಗೆ ಸಬ್ಸಿಡಿಯಾಗಿ ಸಿಗುತ್ತದೆ ಎಂದು ಹೇಳಿದ್ದಾಳೆ.
ನೀವು ಲೋನ್ ಪಡಿಬೇಕು ಅಂದ್ರೆ ಮುಂಚಿತವಾಗಿ ಹಣ ಕಟ್ಟಬೇಕು ಈ ರೀತಿ ಹೇಳಿ ವಂಚನೆ ಮಾಡಿದ್ದಾರೆ ನಯ ವಂಚಕರ ತಂಡ ಇದೇ ರೀತಿ ಹೇಳಿಕೊಂಡು ಮಹಿಳೆಯರಿಗೆ ವಂಚನೆ ನೂರಾರು ಜನ ಮಹಿಳೆಯರಿಂದ ಹಣ ವಸೂಲಿ ಮಾಡಿದ ವಂಚಕರ ತಂಡ ಐದು ಸಾವಿರದಿಂದ ಇಪ್ಪತ್ತೈದು ಸಾವಿರದವರೆಗೆ ಹಣ ಕಟ್ಟಿರುವ ಮಹಿಳೆಯರು..
2019 ರಿಂದ ನಿರಂತರವಾಗಿ ಹಣ ಕಟ್ಟಿಸಿಕೊಂಡಿದ್ದಾಳೆ ಈ ಮಹಾ ವಂಚಕಿ ಈಗ ಹಣ ಕಟ್ಟಿದವರು ಲೋನ್ ಕೇಳಿದಾಗ ವಂಚಕೀಯ ನಾಟಕ ಬಟಾ ಬಯಲು ನಕಲಿ ಟ್ರಸ್ಟ್ ಮೂಲಕ ಕೋಟಿ ಕೋಟಿ ವಂಚನೆ ಮಾಡಿರುವ ಪವಿತ್ರ ಆಂಡ್ ಗ್ಯಾಂಗ್ ಒಂದೊಂದು ಮಹಿಳೆಯರ ತಂಡದಲ್ಲಿ ನೂರಾರು ಜನರಿಂದ ಹಣವಸೂಲಿ..
ಸದ್ಯ ವಂಚನೆಗೆ ಒಳಗಾಗಿರುವವರು ಮಹಿಳೆಯರು ಕಂಗಾಲು ಪರಿಚಯ ಅಂತ ಹೇಳಿ ನೂರಾರು ಜನರಿಂದ ಹಣ ಕಟ್ಟಿಸಿದ್ದ ಮಹಿಳೆಯರು ಅಕ್ಕ ಪಕ್ಕದ ಮನೆ ಊರಿನವರಿಂದ ಹಣ ಕಟ್ಟಿಸಿದ್ದ ಮಹಿಳೆಯರಿಗೆ ಆಘಾತ ಈಗಾಗಲೇ ಪವಿತ್ರ ಮೇಲೆ ಸೂರ್ಯ ನಗರದಲ್ಲಿ , ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವ ಮೋಸ ಹೋದ ಮಹಿಳೆಯರು