ವಿಡಿಯೋದಲ್ಲಿ ಕಂತೆ ಕಂತೆ ಹಣ ತೋರಿಸಿ ಅಮಾಯಕರ ಬಲೆ ಬೀಸಿ ವಂಚಿಸುತ್ತಿದ್ದ ಆರೋಪಿ ವಂಚಕ ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರಿಂದ ಕಿಶನ್ ಅರೆಸ್ಟ್ ವಂಚಕ ಕಿಶನ್ನನ್ನು ನಂಬಿ ಲಕ್ಷಲಕ್ಷ ಹಣ ಕಳೆದುಕೊಂಡಿದ್ದ ಜನ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕರಿಗೆ ಬಲೆ ಬೀಸಿ ವಂಚಿಸುತ್ತಿದ್ದ
ಕಿಶನ್ ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿದ್ದ ಗುಣನಿಧಿ ಎಂಬುವವರು ನೀಡಿರುವ ದೂರಿನ ಮೇರೆಗೆ ಎಫ್ಐಆರ್ 15.15 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಎಂದು ದೂರು ಸ್ನೇಹಿತ ಗೌತಮ್ ಮೂಲಕ ಗುಣನಿಧಿಗೆ ಪರಿಚಯವಾಗಿದ್ದ ಕಿಶನ್ ಸಾಲಕ್ಕಾಗಿ ಪ್ರೋಕರ್ ವೆಂಕಟೇಶ್ ಸಂಪರ್ಕಿಸುವಂತೆ ತಿಳಿಸಿದ್ದ ಕಿಶನ್ ದಾಖಲೆ ಪಡೆದು ಬ್ಯಾಂಕಿನಿಂದ ಲೋನ್ ಕೊಡಿಸಿದ್ದ
ಬ್ರೋಕರ್ ವೆಂಕಟೇಶ್ ಸಾಲದ ಹಣ RTGS ಮೂಲಕ ಕಿಶನ್ ಅಕೌಂಟಿಗೆ ವರ್ಗಾವಣೆ ಬ್ಯಾಂಕ್ ಲೋನ್ EMI ತಾನೇ ಪಾವತಿಸುವುದಾಗಿ ನಂಬಿಸಿದ್ದ ಕಿಶನ್ ಮೊದಲ 5-6 ಕಂತು ಪಾವತಿಸಿದ್ದ ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಒಂದೇ ವರ್ಷಕ್ಕೆ ಲೋನ್ ಕ್ಲಿಯರ್ ಮಾಡಿ ಪ್ರಾಫಿಟ್ ನೀಡುವ ಆಮಿಷ ಇದೇ ರೀತಿ ನೂರಾರು ಜನರನ್ನು ನಂಬಿಸಿ ವಂಚನೆ ಮಾಡಿರುವ ಕಿಶನ್ ಸುಮಾರು 80-100 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಶಂಕೆ
ಹಣ ವಾಪಸ್ ಕೇಳಿದ್ರೆ ಗನ್ ತೋರಿಸಿ ಬೆದರಿಸುತ್ತಿರುವ ಆರೋಪ ಕಿಂಗ್ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿರುವ ವಂಚಕ ಕಿಶನ್ ಜೀವ ಭಯದಿಂದ ದೂರು ನೀಡಲು ಹೂಡಿಕೆದಾರರ ಹಿಂಜರಿಕೆ ವಂಚನೆಗೊಳಗಾದವರು ಬಂದು ದೂರು ನೀಡುವಂತೆ ಡಿಸಿಪಿ ಮನಲಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲ್ ಅಡಾವತ್ ಮನವಿ