ಗೋಲ್ಡ್ ಮ್ಯಾನ್ ಸಚ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ವಿಕಾಸ ನಗರದ ಗಿರಿಶ ಅವರಿಗೆ ವಾಟ್ಸ್ಆಯಪ್ನಲ್ಲಿ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹8.99 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಗಿರೀಶ ಅವರಿಗೆ ಸಂದೇಶ ಕಳುಹಿಸಿದ ವಂಚಕ, ಅವರ ಫೋನ್ ನಂಬರ್ ಅನ್ನು ವಾಟ್ಸ್ಆಯಪ್ ಗ್ರೂಪ್ಗೆ ಸೇರಿಸಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿದ್ದಾನೆ.
ಅದನ್ನು ನಂಬಿದ ಅವರು ಹಣ ವರ್ಗಾಯಿಸಿದ್ದಾರೆ.
ಅದೇ ರೀತಿ ಹಳೇಹುಬ್ಬಳ್ಳಿಯ ಉಸ್ಮಾನ್ ಜಮಾದಾರ್ ಅವರಿಗೂ ವಾಟ್ಸ್ಆಯಪ್ನಲ್ಲಿ ಸಂದೇಶ ಕಳುಹಿಸಿದ ವಂಚಕರು, ಅವರಿಂದ ₹10.03 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣದ ದಾಖಲಾಗಿದೆ.