ಬೆಂಗಳೂರು: ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಇಂದು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಂಬಂಧ ಸಭೆ ನಡೆಯಲಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಸಾರಿಗೆ ಇಲಾಖೆಯ 4 ನಿಗಮಗಳೊಂದಿಗೆ ಚರ್ಚೆ ಮಾಡಲಿದ್ದಾರೆ.
ನಿಗಮಗಳ ಆದಾಯದಲ್ಲಿ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ. ಸರ್ಕಾರದ ಯೋಜನೆಯಾದ್ದರಿಂದ ನಿಗಮಗಳಿಂದ ಹಣ ಭರಿಸಲು ಆಗಲ್ಲ.
ಈಗಾಗಲೇ ಈ ಅಂಶಗಳನ್ನು ಸಿಎಂ ಸಿದ್ಧರಾಮಯ್ಯ ಗಮನಕ್ಕೆ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ತಂದಿದ್ದಾರೆ. ಇಂದು 4 ಸಾರಿಗೆ ನಿಗಮಗಳ ಹಣಕಾಸಿನ ಸ್ಥಿತಿ ಬಗ್ಗೆ ಅವಲೋಕಿಸಲಿರುವ ಸಚಿವರು, ಬಸ್ ಪಾಸ್ ಸಬ್ಸಿಡಿ ಬಗ್ಗೆ ನಿರ್ಧರಿಸಲಿದ್ದಾರೆ.