ಬೆಂಗಳೂರು: ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸದ್ಯ ಗ್ಯಾರಂಟಿ ಯೋಜನೆ ಅನುಷ್ಠಾಕ್ಕೆ ಭಾರೀ ಕಸರತ್ತು ಮಾಡುತ್ತಿದೆ.ಗೃಹ ಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಬಗ್ಗೆ ಸಾಲು ಸಾಲು ಗೊಂದಲಗಳನ್ನ ಬಗೆಹರಿಸುಲು ಯತ್ನಿಸುತ್ತಿರೋ ಸರ್ಕಾರ, ಇದೀಗ ಶಕ್ತಿ ಯೋಜನೆ ಅನುಷ್ಠಾನಕ್ಕೆ ಸಜ್ಜುಗೊಂಡಿದೆ.ಹಾಗಾದರೆ ಭಾನುವಾರದಿಂದ ಮಹಿಳೆಯರಿಗೆ ಬಸ್ನಲ್ಲಿ ಫ್ರೀ ಸೇವೆ ನೀಡಲು ಸರ್ಕಾರ ಹೇಗೆಲ್ಲಾ ಸಿದ್ದಗೊಂಡಿದೆ ಅನ್ನೋ ರಿಪೋರ್ಟ್ ಇಲ್ಲಿದೆ.
ಪಂಚ ಕಜ್ಜಾಯದಂತಹ ಪಂಚ ಗ್ಯಾರಂಟಿಗಳ ಪೈಕಿ ಅತಿ ಪ್ರಮುಖವಾದ ಗ್ಯಾರಂಟಿ ಅಂದರೆ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ.ಈ ಯೋಜನೆಗೆ ರಾಜ್ಯದಲ್ಲಿ ಗದ್ದಲ -ಗಲಾಟೆ ನಡೆದಿದ್ದವು.ಸದ್ಯ ಈ ಶಕ್ತಿ ಯೋಜನೆಗೆ ಶಕ್ತಿ ತುಂಬಲು ಸರ್ಕಾರ ಮುನ್ನಟಿ ಇಟ್ಟಿದೆ.ಭಾನುವಾರ ಬೆಂಗಳೂರಿನ ವಿಧಾನಸೌಧ ಮುಂಭಾಗ ಶಕ್ತಿ ಯೋಜಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರೆ,ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿಗಳು ಸಹ ಚಾಲನೆ ನೀಡಲು ಪ್ಲಾನ್ ರೂಪಿಸಿಲಾಗಿದೆ.
ಜೂನ್ 11 ರಂದು ಶಕ್ತಿ ಸ್ಕೀಂಗೆ ಚಾಲನೆಗೆ ಏನೆಲ್ಲಾ ಸಿದ್ದತೆ..
-ಭಾನುವಾರ 11 ಗಂಟೆಗೆ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
-ಜೂನ್ 11 ರಂದು ವಿಧಾನಸೌಧ ಮುಂಭಾಗ ಯೋಜನೆಗೆ ಚಾಲನೆ ಸಿದ್ದತೆ
– ಭಾನುವಾರ ಮಧ್ಯಾಹ್ನದಿಂದ ಮಹಿಳೆಯರು ಫ್ರೀಯಾಗಿ ಓಡಾಟಕ್ಕೆ ಅವಕಾಶ
-ರಾಜ್ಯಾದ್ಯಂತ ಸರ್ಕಾರಿ ಫ್ರೀಮಿಯಂ ಬಸ್ ಗಳಲ್ಲಿ ಫ್ರೀ ಒಡಾಟಕ್ಕೆ ಅವಕಾಶ.-
-ಯೋಜನೆಯ ಲೋಗೋ ಸ್ಮಾರ್ಟ್ ಕಾರ್ಡ್ ಮಾದರಿ ಅನಾವರಣ
-ಜಿಲ್ಲಾ ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಉಸ್ತುವಾರಿಗಳಿಂದ ಶಕ್ತಿ ಯೋಜನೆಗೆ
ಕರ್ನಾಟಕ ರಾಜ್ಯದೊಳಗಿನ ಪ್ರಯಾಣಿಕರಿಗೆ ಮಾತ್ರ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗ್ತಿದೆ.ರಾಜಹಂಸ,ನಾನ್ ಎಸಿ,ಎಸಿ ಸ್ಲೀಪರ್,ವಜ್ರ,ವಾಯುವಜ್ರ,ಐರಾವತ,ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ,ಫ್ಲೈಬಸ್, ಎಲೆಕ್ಟ್ರಿಕ್ ಬಸ್ ಬಸ್ಗಳಲ್ಲಿ ಫ್ರೀ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.ಬಿಎಂಟಿಸಿ ಹೊರತುಪಡಿಸಿ ಉಳಿದೆಲ್ಲಾ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಶೇ 50 ರಷ್ಟು ಆಸನಗಳು ಪುರುಷರಿಗೆ ಮೀಸಲಿಡಲಾಗಿದೆ.ಶಕ್ತಿ ಕಾರ್ಡ್ ದತ್ತಾಂಶ ಆಧಾರಿಸಿ ಉಚಿತ ಪ್ರಯಾಣ ವೆಚ್ಚವನ್ನ ಸಾರಿಗೆ ನಿಗಮಗಳಿಗೆ ಸರ್ಕಾರ ಭರಿಸುತ್ತದೆ.ಎಲ್ಲಾ ಮಹಿಳೆಯರಿಗೆ ಮೂರು ತಿಂಗಳೊಳಗೆ ಸೇವಾ ಸಿಂಧು ಮೂಲಕ ಅರ್ಜಿ ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗ್ತದೆ.ಅಲ್ಲಿಯವರೆಗೆ ಯಾವಾದಾದರೊಂದು ಗುರುತಿನ ಚೀಟಿ ಪರಿಗಣಿಸಿ ಉಚಿತ ಪ್ರಯಾಣದ ಟಿಕೆಟ್ ನೀಡಲಾಗುತ್ತದೆ.ಶೂನ್ಯ ಟಿಕೆಟ್ ಪಡೆದುಕೊಳ್ಳುವ ಮುನ್ನ ಗುರುತಿನ ಚೀಟಿ ತೋರಿಸಿ ಟಿಕೆಟ್ ಪಡೆದುಕೊಳ್ಳಬೇಕು .ಭಾನುವಾರ ಮಧ್ಯಾಹ್ನ ಒಂದು ಗಂಟೆಯಿಂದ ಕರ್ನಾಟಕ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಫುಲ್ ಫ್ರೀ ಅಂತ ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯಲ್ಲಿ ಕಂಡಕ್ಟರ್ಗಳ ಜವಾಬ್ದಾರಿಗಳೇನು..?
-ಅಂತರಾಜ್ಯಬಸ್ ಗಳಲ್ಲಿ ಸೌಲಭ್ಯ ಇಲ್ಲದನ್ನ ಮಹಿಳೆಯರಿಗೆ ನಯವಾಗಿ ಹೇಳಬೇಕು..!
-ಬಸ್ ನಲ್ಲಿ ಎಲ್ಲಾ ಮಹಿಳೆಯರಿಗೆ ಶೂನ್ಯ ಟಿಕೆಟ್ ನೀಡಬೇಕು
-ಪ್ರಯಾಣದ ವೇಳೆ ಗುರುತಿನ ಚೀಟಿ ಕಂಡಕ್ಟರ್ ಗಳು ಮಾನ್ಯ ಮಾಡಬೇಕು
-ಮಹಿಳೆಯರಿಗೆ ಶೂನ್ಯ ಟಿಕೆಟ್ ನೀಡಿ. ಹಣ ಪಡೆದುಕೊಳ್ಳಬಾರದು
– ಮಹಿಳಾ ಪ್ರಯಾಣಿಕರ ಜೊತೆ ವಿನಯ ದಿಂದ ನಡೆದುಕೊಳ್ಳಬೇಕು.ದೂರು ಬರದಂತೆ ಕಾರ್ಯ ನಿರ್ವಹಿಸಬೇಕು.
-ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳಿ ಬಸ್ ನಲ್ಲಿ 50 ರಷ್ಟು ಆಸನಗಳು ಮಹಿಳೆಯರಿಗೆ ಮೀಸಲು ಇಡಬೇಕು.
– ನಿಲ್ದಾಣಗಳಲ್ಲಿ ಬಸ್ ಗಳನ್ನ ನಿಲ್ಲಸಬೇಕು , ಮಹಿಳೆಯರು ಇದ್ದಾರೆ ಅಂತ ಬಸ್ ನಿಲ್ಲಿಸದೆ ಹೋಗುವಂತಿಲ್ಲ.
ಒಟ್ಟಿನಲ್ಲಿ ಶಕ್ತಿ ಯೋಜನೆಗೆ ಶಕ್ತಿ ನೀಡಲು ಸರ್ಕಾರ ಎಲ್ಲಾ ರೀತಿಯಲ್ಲಿ ಸಜ್ಜು ಗೊಂಡಿದೆ.ಭಾನುವಾರ ಶಕ್ತಿ ಸ್ಕೀಂ ಗ್ಯಾರಂಟಿಗೆ ಚಾಲನೆ ನೀಡಲಿದ್ದು,ಮಹಿಳೆಯರು ಉಚಿತವಾಗಿ ಎಲ್ಲೆಂದರಲ್ಲಿ ಓಡಾಟ ಮಾಡಬಹುದು .ಇದರಿಂದ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರು ದುಪ್ಪಟ್ಟು ಆಗೋದು ಸದ್ಯ.ಈ ಬೇಡಿಕೆಯನ್ನು ಸಾರಿಗೆ ನಿಗಮಗಳು ಬಸ್ ಗಳ ಕೊರತೆ ನಡುವೆ ಹೇಗೆಲ್ಲಾ ನಿರ್ವಹಣೆ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕು..