ಕನ್ನಡ ರಾಜ್ಯೋತ್ಸವ ಹಾಗೂ ಡಾ ಪುನೀತ್ ರಾಜ್ಕುಮಾರ್ ರವರ ಸವಿ ನೆನಪಿನಲ್ಲಿ ಕೆಆರ್ ಪುರ ಕ್ಷೇತ್ರದ್ಯಾಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಅವರು ತಿಳಿಸಿದರು. ಕ್ಷೇತ್ರದ ಹೊರಮಾವು ವಾಡ್೯ನ ಶಾಲೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯ ಸಹಕಾರದಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ , ಕಿವಿ, ಮೂಗು ಹಾಗೂ ನೇತ್ರ ತಪಾಸಣಾ ಶಿಭಿರ ನಡೆಸಿ ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಿ ಮಾತನಾಡಿದರು.
ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿನಲ್ಲಿ ಕಳೆದ ಎರಡು ವರ್ಷದಿಂದ ಈ ಶಿಬಿರ ಆಯೋಜನೆ ಮಾಡುತ್ತಿದ್ದು, ಕ್ಷೇತ್ರದ 11 ವಾರ್ಡ್ನಲ್ಲಿ 11 ಜಾಗದಲ್ಲಿ ಪ್ರತೀ ವಾರ ಈ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪಣತೊಟ್ಟಿದ್ದು,ರಾಜ್ಯ ಸರ್ಕಾರದ ಹಲವು ಮಹತ್ತರ ಯೋಜನೆಗಳಿಂದ ಜನತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕೆ.ಆರ್.ಪುರ ಕ್ಷೇತ್ರದಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಬಾವುಟ ಹಾರಿಸುವುದು ಶತಸಿದ್ದ,ಈ ನಿಟ್ಟಿನಲ್ಲಿ ಮತ್ತಷ್ಟು ಸಂಘಟನೆ ಬಲಿಷ್ಠ ಒಗೊಳಿಸಲಾಗುತ್ತಿದೆ ಎಂದರು. ಆಯೋಜಕ ಹೊರಮಾವು ವಾರ್ಡನ ಹಿರಿಯ ಮುಖಂಡ ಆರ್.ಪ್ರಕಾಶ್ ಅವರು ಮಾತನಾಡಿ ಆರೋಗ್ಯ ಶಿಬಿರ ಯಶಸ್ವಿಯಾಗಿದ್ದು 300ಕ್ಕು ಹೆಚ್ಚು ಮಂದಿ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್,ಹಿರಿಯ ಮುಖಂಡ ಅಗರ ಆರ್.ಪ್ರಕಾಶ್, ವಾರ್ಡ್ ಅಧ್ಯಕ್ಷ ಪ್ರಸನ್ನ, ಬಾಬು, ಮುಖಂಡರಾದ ಹನುಮಪ್ಪರೆಡ್ಡಿ, ಬಾಬು,ಎಂ, ವೆಂಕಟೇಶ್, ಗೆದ್ದಲಹಳ್ಳಿ ಮುನಿರಾಜು, ಕ್ಯಾಲಸನಹಳ್ಳಿ ಶ್ರೀನಿವಾಸ್,ಮುನಿಕೃಷ್ಣ ಮತ್ತಿತರರಿದ್ದರು.