ಪ್ಯಾರಿಸ್ ದೇಶದಲ್ಲಿ ಅತಂತ್ರ ಚುನಾವಣಾ ಫಲಿತಾಂಶ ಬಂದಿರುವುದರಿಂದ, ಫ್ರಾನ್ಸ್ ಪ್ರಧಾನ ಮಂತ್ರಿ ಗೇಬ್ರಿಯರ್ ಅಟ್ಟಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅಟ್ಟಲ್ ಅವರ ರಾಜೀನಾಮೆಯನ್ನು ಅಂಗೀಕರಿಸಲು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಿರಾಕರಿಸಿದ್ದಾರೆ.
ದೇಶದ ಸ್ಥಿರತೆಗಾಗಿ ತಾತ್ಕಾಲಿಕವಾಗಿ ಸರ್ಕಾರದ ಮುಖ್ಯಸ್ಥರಾಗಿ ಹುದ್ದೆಯಲ್ಲಿ ಮುಂದುವರೆಯುಂತೆ ಗೇಬ್ರಿಯಲ್ ಅವರನ್ನು ಕೇಳಿಕೊಂಡಿದ್ದಾರೆ.
ಭಾನುವಾರ ಫ್ರಾನ್ಸ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆದರೆ ಯಾವುದೇ ಬಣ ಅಥವಾ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲ. ಈ ಫಲಿತಾಂಶವು ಯುರೋಪಿಯನ್ ಒಕ್ಕೂಟಕ್ಕೆ ಆರ್ಥಿಕ ಹಿನ್ನಡೆಯ ಆತಂಕವನ್ನು ಹೆಚ್ಚಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗುವ ಮೂರು ವಾರಗಳ ಮೊದಲು ದೇಶದಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗಿದೆ.
ಅಗತ್ಯವಿದ್ದರೆ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದ ಗೇಬ್ರಿಯಲ್, ಸೋಮವಾರ ಮುಂಜಾನೆ ರಾಜೀನಾಮೆ ನೀಡಿದರು. 7 ತಿಂಗಳ ಹಿಂದೆ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.