ಬಿಗ್’ ಮನೆಯಲ್ಲಿ (Bigg Boss House) ಮತ್ತೊಂದು ಚೆಂದದ ಜೋಡಿಯಾಗಿ ನಮ್ರತಾ ಗೌಡ (Namratha Gowda) ಮತ್ತು ಸ್ನೇಹಿತ್ (Snehith Gowda) ಹೈಲೆಟ್ ಆಗಿದ್ದಾರೆ. ನಮ್ರತಾ ಹಿಂದೆ ಹಿಂದೆ ಹೋಗೋದು. ತುಂಟಾಟ ಆಡೋದು ಈಗಂತೂ ಸ್ನೇಹಿತ್ಗೆ ಟಾಸ್ಕ್ ಆಗಿ ಹೋಗಿದೆ. ಹೀಗಿರುವಾಗ ನಮ್ರತಾ ಜೊತೆ ರೊಮ್ಯಾನ್ಸ್ ಮಾಡೋದು ಇಷ್ಟ ಎಂದಿದ್ದಾರೆ ಸ್ನೇಹಿತ್.
ಮೊನ್ನೆಯಷ್ಟೇ ಕಿಚ್ಚನ ಪಂಚಾಯಿತಿಯಲ್ಲಿ ನಮ್ರತಾ ಕಡೆಯಿಂದ ಎಂದೂ ರಾಖಿ ಕಟ್ಟಿಸಿಕೊಳ್ಳೋದಿಲ್ಲ ಎಂದು ನೇರವಾಗಿ ಸುದೀಪ್ (Sudeep) ಮುಂದೆ ಸ್ನೇಹಿತ್ ಹೇಳಿದ್ದರು. ಆಗ ಕಿಚ್ಚ, ಸರಿ ನಿಮಗೊಂದು ವಾರ ಕಾಲಾವಕಾಶ ಕೊಡುತ್ತೇನೆ ಅದೇನು ಮಾಡ್ತಿರೋ ಮಾಡಿ. ನಮ್ರತಾನಾ ಒಪ್ಪಿಸಿ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದನ್ನೇ ಸ್ನೇಹಿತ್ ಸಿರಿಯಸ್ ಆಗಿ ಪರಿಣಿಸಿದಂತಿದೆ. ಈಗ ನಮ್ರತಾಗೆ ಸ್ನೇಹಿತ್ ಕಾಳು ಹಾಕೋಕೆ ಶುರು ಮಾಡಿದ್ದಾರೆ. ಅವರು ಅದೆಷ್ಟೇ ಹುಸಿ ಮುನಿಸು ತೋರಿಸಿದ್ದರು. ನಮ್ರತಾರನ್ನ ಬಿಟ್ಟು ಬಿಡದೇ ಸ್ನೇಹಿತ್ ಕಾಡ್ತಿದ್ದಾರೆ. ಇದೀಗ ನಮ್ರತಾ ಮುಂದೆ ರೊಮ್ಯಾನ್ಸ್ ಬಗ್ಗೆ ಸ್ನೇಹಿತ್ ಮಾತೆತ್ತಿದ್ದಾರೆ.
ನೀವು ಬಂದ ಮೇಲೆ ಸೂರ್ಯ ಹೊರಗೆ ಬಂದ ನೋಡಿ ಎಂದ ಸ್ನೇಹಿತ್ ನಮ್ರತಾಗೆ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ನನ್ನ ಜಾಗದಲ್ಲಿ ಬೇರೇ ಹುಡುಗಿ ಇದಿದ್ರೆ ವರ್ಕೌಟ್ ಆಗ್ತಿತ್ತು ಎಂದು ನಮ್ರತಾ, ಸ್ನೇಹಿತ್ ಎಚ್ಚರಿಸಿದ್ದಾರೆ. ನಮ್ಮ ವರ್ಕೌಟ್ ನಾವು ಮಾಡ್ತಿರಬೇಕು. ಉಳಿದಿದೆಲ್ಲ ದೇವರಿಗೆ ಬಿಡಬೇಕು ಎಂದು ಸ್ನೇಹಿತ್ ನಮ್ರತಾಗೆ ಪ್ರತಿಯುತ್ತರ ನೀಡಿ ಸ್ಮೈಲ್ ಮಾಡಿದ್ದಾರೆ. ಸ್ನೇಹಿತ್ ಅವರ ತಂದೆ-ತಾಯಿ ಇದನ್ನ ನೋಡ್ತಿದ್ರೆ, ದಯವಿಟ್ಟು ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದಿದ್ದಾರೆ ನಮ್ರತಾ.