ರಾಜ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರ್ತಿದೆ, ಈಗಾಗ್ಲೆ ಕೇಂದ್ರ ನಾಯಕರು ಕರುನಾಡ ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ. ಬಿಜೆಪಿಯಲ್ಲಿ ಅಮಿತ್ ಶಾ, ಯೋಗಿ ನಂತ್ರ ಪ್ರಧಾನಿ ಮೋದಿ ರಾಜ್ಯ ದಂಡಯಾತ್ರೆಗೆ ಬರ್ತಿದ್ದಾರೆ, 6 ದಿನಗಳ ಕಾಲ ಮೋದಿ ಮೇನಿಯ ನಡೆಯಲಿದ್ದು ಚುನಾವಣಾ ಲೆಕ್ಕಾಚಾರ ಬದಲಿಸುವ ಮೆಗಾ ರೋಡ್ ಶೋ ಗೆ ಕೇಸರಿ ಪಡೆ ಪ್ಲಾನ್ ಮಾಡ್ತಿದೆ. ಹಳೇ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿರುವ ಹೈಕಮಾಂಡ್ ಇಬ್ಬರು ಮಾಜಿ ಸಿಎಂ ಗಳಿಗೆ ಠಕ್ಕರ್ ಕೊಡಲು ಅಖಾಡ ಸಿದ್ದಪಡಿಸ್ತಿದೆ..
ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ರಂಗೇರ್ತಿದೆ, ಕಾಂಗ್ರೆಸ್- ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ಮಾಡ್ತಿದೆ. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯದ ಜನರ ಮನಗೆಲ್ಲಲು ಅಬ್ಬರಿಸ್ತಿದ್ದಾರೆ. ಇತ್ತ ಬಿಜೆಪಿಯವರು ನಾವೇನು ಕಮ್ಮಜ ಇಲ್ಲ ಅನ್ನೋತರ ಚುನಾವಣಾ ಚಾಣಕ್ಯ ಅಮಿತ್ ಶಾ, ಹಿಂದೂ ಫೈಯರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರ ಸಚಿವರು ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಈ ನಡುವೆ ಕೇಸರಿ ಪಡೆಗೆ ಮತ್ತಷ್ಟು ಬಲ ತುಂಬಲು ಚುನಾವಣಾ ಅಖಾಡದ ಫಲಿತಾಂಶ ಬದಲಿಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಅಖಾಡಕ್ಕೆ ಬರ್ತಿದ್ದಾರೆ...
ರಾಜ್ಯದಲ್ಲಿ ಮಿಷನ್ 150 ಟಾರ್ಗೆಟ್ ಹಾಕಿಕೊಂಡಿರುವ ರಾಜ್ಯ ಬಿಜೆಪಿ ಚುನಾವಣಾ ಅಖಾಡಕ್ಕೆ ವೇದಿಕೆ ರೇಡಿ ಮಾಡಿಕೊಂಡಿದೆ. 98 ಜನ ಕೇಂದ್ರದ ಬಿಜೆಪಿ ನಾಯಕರು, ಸಚಿವರು, ಸಂಸದರು, ಸೇರಿದಂತೆ 150 ರಾಜ್ಯ ನಾಯಕರು ಚುನಾವಣೆ ಪ್ರಚಾರ ನಡೆಸಲು ಪ್ಲಾನ್ ರೆಡಿಯಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಬಾರಿ ರಾಜ್ಯ ಪ್ರವಾಸವನ್ನ ಮಾಡಿದ್ದಾರೆ, ಇದೀಗ ಅಂತಿಮ ಸುತ್ತಿನ ಸರಣಿ ಪ್ರಚಾರದ ದಂಡಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ನಮೋ. ರಾಜ್ಯದಲ್ಲಿ 6 ದಿನಗಳ ಕಾಲ ಮತ ಬೇಟೆಯಾಡಲಿರೋ ಮೋದಿ ಏಪ್ರಿಲ್ 29 ರಿಂದ ಮೇ 7 ರ ವರೆಗೆ ಭರ್ಜರಿ ಚುನಾವಣೆ ಪ್ರಚಾರ ಕಾರ್ಯಕ್ರಮ ನಡೆಸಲಿದ್ದಾರೆ. ರಾಜ್ಯದ 20 ಕ್ಕೂ ಹೆಚ್ಚು ಭಾಗಗಳಲ್ಲಿ ರೋಡ್ ಶೋ ಹಾಗೂ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ಮೋದಿ ಪ್ರಚಾರದ ವೇಳಾಪಟ್ಟಿ ನೋಡೋದಾದ್ರೆ
ಏಪ್ರಿಲ್ 29 – ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ ದಲ್ಲಿ ರೋಡ್ ಶೋ
ಏಪ್ರಿಲ್ 30 – ಕೋಲಾರ, ಚನ್ನಪಟ್ಟಣ, ವರುಣಾ, ಬೇಲೂರು, ಮೈಸೂರು, ಜಿಲ್ಲೆಗಳಲ್ಲಿ ಬೃಹತ್ ರೋಡ್ ಶೋ
ಮೇ 2 – ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ, ಜಿಲ್ಲೆಗಳಲ್ಲಿ ರೋಡ್ ಶೋ, ಸಮಾವೇಶ
ಮೇ 3 – ಮೂಡಬಿದರೆ, ಕಾರವಾರ, ಕಿತ್ತೂರಿನಲ್ಲಿ ಸಮಾವೇಶ
ಮೇ 6 – ಚಿತ್ತಾಪುರ, ನಂಜನಗೂಡು, ತುಮಕೂರು, ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಮೋದಿ ಬೃಹತ್ ಸಮಾವೇಶ, ರೋಡ್ ಶೋ
ಮೇ 7 – ಬಾದಾಮಿ, ಹಾವೇರಿ, ಶಿವಮೊಗ್ಗ, ಗ್ರಾಮಾಂತರ, ಬೆಂಗಳೂರು ಕೇಂದ್ರದಲ್ಲಿ ಭರ್ಜರಿ ರೋಡ್ ಶೋ
ಕೇಸರಿ ಪಡೆ ಪ್ರಧಾನಿ ರೋಡ್ ಶೋ ನಲ್ಲಿ ಪ್ರಮುಖವಾಗಿ ಹಳೇ ಮೈಸೂರು ಭಾಗವನ್ನೇ ಹೆಚ್ಚು ಟಾರ್ಗೆಟ್ ಮಾಡಿದೆ. ಇಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಇಬ್ಬರು ಮಾಜಿ ಸಿಎಂ ಗಳ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ, ವರುಣಾದಲ್ಲಿ ಸಿದ್ದರಾಮಯ್ಯ ರನ್ನ ಸೋಲಿಸಲು ಮೋದಿ ಎಂಬ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸ್ತಿದೆ ಕಮಲ ಪಡೆ. ಇನ್ನು ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಕ್ಕೂ ಹೆಚ್ಚು ಒತ್ತು ಕೊಡ್ತಿದ್ದು.
ಬಿಜೆಪಿ ಪ್ರಭಾವವಿರುವ ಕರಾವಳಿಯ ಕೆಲವೊಂದಷ್ಟು ಭಾಗಗಳಲ್ಲಿ ಮಾತ್ರ ಮೋದಿ ಪ್ರಚಾರ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಪ್ರಚಾರದಿಂದ ರಾಜ್ಯದ ಅಖಾಡ ಮತ್ತಷ್ಟು ರಂಗೇರಲಿದೆ, ಗುಜರಾತ್ ನಲ್ಲಿ ಸಕ್ಸ ಸ್ ಆದ ರೋಡ್ ಶೋ ಅಸ್ತ್ರವನ್ನೇ ಕರ್ನಾಟಕದಲ್ಲಿ ಬಳಸ್ತಿದೆ ಬಿಜೆಪಿ ಹೈಕಮಾಂಡ್. ಹಳೇ ಮೈಸೂರು ಭಾಗದಲ್ಲಿ ಮೋದಿ ಮೇನಿಯಾ ವರ್ಕ್ ಆಗುತ್ತಾ, ಮಾಜಿ ಸಿಎಂಗಳ ಕ್ಷೇತ್ರದಲ್ಲಿ ಮೋದಿ ರೋಡ್ ಶೋನಿಂದ ಎಫೆಕ್ಟ್ ಆಗುತ್ತಾ ಎಂಬುದನ್ನ ಕಾದುನೋಡಬೇಕಿದೆ….