ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನವರು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸಾಕಷ್ಟು ಮಾಹಿತಿಗಳು ಬಯಲಾಗುತ್ತಿದ್ದು ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದು ದರ್ಶನ್ ಎಂಡ್ ಗ್ಯಾಂಗ್ ನಿಂದ ಅಂದು ನಾನು ಬದುಕಿ ಬಂದಿದ್ದೆ ಹೆಚ್ಚು ಎಂದಿದ್ದಾರೆ.
ಮೈಸೂರಿನ ಹೋಟೆಲ್ನಲ್ಲಿ ನನ್ನ ಮೇಲೂ ಹಲ್ಲೆಗೆ ದರ್ಶನ್ ಮತ್ತು ಗ್ಯಾಂಗ್ ಸ್ಕೆಚ್ ಹಾಕಿತ್ತು. ಹೋಟೆಲ್ನಲ್ಲಿ ಹಲ್ಲೆಗೆ ಬೇಕಾದ ಆಯುಧಗಳು ತಂದಿರಿಸಲಾಗಿತ್ತು. ನನ್ನನ್ನು ಹೊಡೆಯುವ ಯೋಜನೆ ಆ ದಿನ ಹಾಕಿಕೊಂಡಿದ್ದರು. ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು ಎಂದು ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ.
ಮೈಸೂರಿನ ಸೋಷಿಯಲ್ಸ್ಗೆ ನನ್ನನ್ನು ಕರೆಸಿಕೊಂಡು ಅವರು ಆಡದ ಮಾತುಗಳಿಲ್ಲ. ನನ್ನೆದುರಿಗೆ ಟೇಬಲ್ ಮೇಲೆ ಆಯುಧಗಳನ್ನು ಇಟ್ಟಿದ್ದರು. ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು. ‘ರಾಬರ್ಟ್’ ಸಿನಿಮಾದ ಚಿತ್ರೀಕರಣದ ವೇಳೆಯೂ ಕೆಲವು ಬಾರಿ ಕೆಲವೊರೊಟ್ಟಿಗೆ ದರ್ಶನ್ ಒರಟಾಗಿ ನಡೆದುಕೊಂಡಿದ್ದರು’’ ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ.
‘ರಾಬರ್ಟ್’ ಚಿತ್ರೀಕರಣದ ವೇಳೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಧ್ಯೆ ಕಿರಿಕ್ ಇರಲಿಲ್ಲ. ಆದ್ರೆ, ಲೋನ್ ವಿಚಾರದಿಂದ ಇಬ್ಬರ ಮಧ್ಯೆ ಬೆಂಕಿ ಹೊತ್ತಿಕೊಂಡಿತು. ದರ್ಶನ್ ಹೆಸರು ಬಳಸಿಕೊಂಡು ಉಮಾಪತಿ ಶ್ರೀನಿವಾಸ್ 25 ಕೋಟಿ ರೂಪಾಯಿ ಬ್ಯಾಂಕ್ ಲೋನ್ಗೆ ಅರ್ಜಿ ಹಾಕಿ ವಂಚನೆಗೆ ಯತ್ನಿಸಿದ್ದಾರೆ ಎಂದು ಡಿಬಾಸ್ ಗ್ಯಾಂಗ್ ಆರೋಪ ಮಾಡಿತ್ತು.