ನಾಗರಿಕರ ಒತ್ತಾಯದಂತೆ ಬಿಬಿಎಂಪಿ ಪಾರ್ಕ್ ತೆರೆಯುವ ಹಾಗೂ ಮುಚ್ಚುವ ಅವಧಿಯನ್ನು ವಿಸ್ತರಣೆ ಮಾಡಿದೆ. ಬೆಳಿಗ್ಗೆ 5 ರಿಂದ ರಾತ್ರಿ 10ಗಂಟೆಯ ವರೆಗೆ ಪಾರ್ಕ್ಗಳನ್ನು ತೆರೆಯಲು ನಿರ್ಧಾರ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಮೊದಲು ಬೆಳಗ್ಗೆ 5ರಿಂದ ಬೆಳಗ್ಗೆ 10ರ ತನಕ ಪಾರ್ಕ್ಗಳು ತೆರೆದಿರುತ್ತಿತ್ತು.
ಬಳಿಕ ಮಧ್ಯಾಹ್ನ 1:30ರಿಂದ ರಾತ್ರಿ 8ರ ತನಕ ಪಾರ್ಕ್ಗಳನ್ನು ತೆರೆಯಲು ಅವಕಾಶ ಇತ್ತು.
ಈಗ ನಾಗರಿಕರ ಒತ್ತಾಯದ ಮೇರೆಗೆ ಪಾರ್ಕ್ ತೆರೆಯುವ ಸಮಯ ಹೆಚ್ಚಳ ಮಾಡಿದ್ದೇವೆ. ಪಾರ್ಕ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಇರುತ್ತೆ, ಎಲ್ಲಾ ರೀತಿಯ ಸುರಕ್ಷಿತ ಕ್ರಮ ಕೈಗೊಳ್ಳುತ್ತೇವೆ. ಆದರೆ ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ತೋಟಗಾರಿಕೆ ವ್ಯಾಪ್ತಿಯಲ್ಲಿ ಇರುವ ಪಾರ್ಕ್ಗಳಿಗೆ ಈ ಅವಧಿ ವಿಸ್ತರಣೆ ಅನ್ವಯ ಆಗುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಫ್ಲೆಕ್ಸ್ ಹಾವಳಿ ವಿಚಾರವಾಗಿ, ಇನ್ನು ಮುಂದೆ ನಗರದಲ್ಲಿ ಫ್ಲೆಕ್ಸ್ ಕಟ್ಟಿದರೆ ಆ ವ್ಯಾಪ್ತಿಯ ಅಧಿಕಾರಿಗಳಿಗೆ ಕೇಸ್ ಬೀಳಲಿದೆ. ಫ್ಲೆಕ್ಸ್ ಕಟ್ಟಿದರೆ ಆ ಏರಿಯಾದ ಅಧಿಕಾರಿ ಮೇಲೂ ಕೇಸ್ ಮಾಡಲಾಗುತ್ತದೆ. ಫ್ಲೆಕ್ಸ್ ಗಳನ್ನು ಹಾಕಬೇಡಿ ಎಂದು ನಾವು ಹೇಳಿದ್ದೇವೆ. ಆದರೆ ಎಲ್ಲಾ ಕಡೆಯೂ ಫ್ಲೆಕ್ಸ್ಗಳನ್ನು ಹಾಕ್ತಿದ್ದಾರೆ. ಈ ಹಿಂದೆ ಆಯುಕ್ತರು ನನ್ನ ಮೇಲೆ ಕೇಸ್ ಹಾಕಿದ್ದರು.
ಆ ಏರಿಯಾದಲ್ಲಿ ಯಾರು ರೆವಿನ್ಯೂ ಅಧಿಕಾರಿ ಇರ್ತಾರೂ ಅವನ ಮೇಲೆ ಕೇಸ್ ಹಾಕೋಕೆ ಹೇಳಿದ್ದೇನೆ. ನಾನು ಸುಮಾರು ನೂರು ಕರೆ ಮಾಡಿದ್ದೇನೆ. ಅದಕ್ಕಾಗಿ ಅಧಿಕಾರಿ ಹೊಣೆ ಮಾಡಲು ಸೂಚನೆ ನೀಡಿದ್ದೇನೆ. ಯಾರಾದರೂ ಫ್ಲೆಕ್ಸ್ ಕಟ್ಟಿದರೆ 1553 ಗೆ ಸಾರ್ವಜನಿಕರು ಕರೆ ಮಾಡಬಹುದು. ಅಲ್ಲಿ ಫ್ಲೆಕ್ಸ್ ಕಟ್ಟಿದಾಗ ಫೋಟೋ ತೆಗೆದು ಈ ನಂಬರ್ಗೆ ಕಳುಹಿಸಲಿ. ಅಥವಾ 22660000 ಇದಕ್ಕೆ ಕರೆ ಮಾಡಬಹುದು. 9480685700, 9480683939 ಈ ನಂಬರ್ಗೆ ವಾಟ್ಸಪ್ ಮಾಡಬಹುದು