ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ ವಿದ್ಯಾನಗರ ಬೆಂಗಳೂರು ಇಲ್ಲಿನ ತರಬೇತಿ ಕೇಂದ್ರಕ್ಕೆ ಅಥ್ಲೆಟಿಕ್ಸ್ ಹಾಗೂ ಈಜು ಕ್ರೀಡೆಗಳಲ್ಲಿ ಪ್ರತಿಭಾನ್ವಿತರಾಗಿರುವ ಹಾಗೂ ಪ್ರತಿಭೆಗಳನ್ನು ಆಯ್ಕೆ ಮಾಡುವ ಸಲುವಾಗಿ ಜಯ ಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ಕ್ರೀಡಾಶಾಲೆ, ವಿದ್ಯಾನಗರ, ಬೆಂಗಳೂರು ಕೇಂದ್ರಗಳಲ್ಲಿ ಏಪ್ರಿಲ್ 15 ಮತ್ತು 16 ರಂದು ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.
ಭಾಗವಹಿಸಲು ಅರ್ಹತೆಗಳು.
2024ರ ಜುಲೈ 1ಕ್ಕೆ 14 ವರ್ಷ ಮೇಲ್ಪಟ್ಟವರಾಗಿದ್ದು 23 ವರ್ಷ ಒಳಪಟ್ಟವರಾಗಿರಬೇಕು. ಪ್ರಸಕ್ತ 2023 – 24ನೇ ಸಾಲಿನಲ್ಲಿ 10ನೇ ತರಗತಿಯನ್ನು ಅಭ್ಯಾಸಿಸುತ್ತಿದ್ದು, ಶೈಕ್ಷಣಿಕ ವರ್ಷ 2024 – 25ನೇ ಸಾಲಿನ ಪ್ರಥಮ ಪದವಿಪೂರ್ವ ಕೊರ್ಸ್ (1st PUC) ಗೆ ಪ್ರವೇಶ ಪಡೆಯುವ ಅರ್ಹತೆ ಉಳ್ಳವರಾಗಿರಬೇಕು.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಇಲಾಖೆಯ ಕ್ರೀಡಾಶಾಲೆ / ನಿಲಯ ಯೋಜನೆಯಲ್ಲಿ ಆಯ್ಕೆಗೊಂಡಿರುವ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ. ಈ ಆಯ್ಕೆ ಪ್ರಕ್ರಿಯೆ ದಿನದಂದು ಸಂಘಟಿಸಲಾಗುವ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.
ಜನ್ಮದಿನಾಂಕದ ದಾಖಲಾತಿಗಾಗಿ ಜನನ ಪ್ರಮಾಣ ಪತ್ರ ಅಥವಾ ಶೈಕ್ಷಣಿಕ ಶಾಲಾಮುಖ್ಯಸ್ಥರಿಂದ ಧೃಡಿಕರಿಸಲ್ಪಟ್ಟ ಹಾಗೂ 10 ನೇ ತರಗತಿ ತೇರ್ಗಡೆಗೊಂಡಿರುವ ಅಂಕಪಟ್ಟಿಯ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಕ್ರೀಡೆಗಳಲ್ಲಿ ಸಾಧಿಸಲಾಗಿರುವ ಸಾಧನೆ ಹಾಗೂ ಸಾಮರ್ಥ್ಯದ ಪ್ರಮಾಣ ಪತ್ರದ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.