ಕಾರ್ಪೊರೇಟ್ ನಿಯಂತ್ರಣದ ವೈಫಲ್ಯದಿಂದ ಎಫ್‌ಟಿಎಕ್ಸ್ (FTX) ಅವನತಿ: ಸಿಇಒ ಜಾನ್ ರೇ ಆರೋಪ

ಅಂತರಾಷ್ಟ್ರೀಯ

ಕಾರ್ಪೊರೇಟ್ ನಿಯಂತ್ರಣದ ಸಂಪೂರ್ಣ ವೈಫಲ್ಯದಿಂದಾಗಿ ಎಫ್‌ಟಿಎಕ್ಸ್ ಅವನತಿಯತ್ತ ಸಾಗುತ್ತಿದೆ ಎಂದು ಎಫ್‌ಟಿಎಕ್ಸ್ ಹೊಸ ಸಿಇಒ ಜಾನ್ ರೇ ಆರೋಪ ಮಾಡಿದ್ದಾರೆ. ಕ್ರಿಪ್ಟೋ ಎಕ್ಸ್‌ಚೇಂಜ್‌ನಲ್ಲಿ ದೋಷ ಕಂಡುಬಂದಿದೆ. ಕಾರ್ಪೊರೇಟ್ ನಿಯಂತ್ರಣದ ಕೊರತೆಯಿಂದ ಎಫ್‌ಟಿಎಕ್ಸ್ ಅಳಿವಿನಂಚಿಗೆ ತಲುಪಿದೆ . ಇದಕ್ಕೆ ನೇರ ಹೊಣೆಗಾರ ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಎಂದು ಜಾನ್ ರೇ ಆರೋಪಿಸಿದ್ದಾರೆ.

ಗುರುವಾರ ಯುಎಸ್ ನ್ಯಾಯಾಲಯದಲ್ಲಿ ಎಫ್‌ಟಿಎಕ್ಸ್‌ನ ಹೊಸ ಸಿಇಒ ಜಾನ್ ರೇ ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ದಿವಾಳಿತನದಿಂದ ಎಫ್‌ಟಿಎಕ್ಸ್‌ ವೈಫಲ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

30 ವರ್ಷದ ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಸ್ಥಾಪಿಸಿ ವಂಡರ್ ಕಿಡ್ ಆಗಿದ್ದನು. ಬೈನಾನ್ಸ್ ಬಿಟ್ಟರೆ ಅತಿದೊಡ್ಡ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಅದಾಗಿತ್ತು. ಅದರ ಮೌಲ್ಯ 30 ಬಿಲಿಯನ್ ಡಾಲರ್ (2.4 ಲಕ್ಷ ಕೋಟಿ ರೂ.) ಆಗಿತ್ತು ಎಂದು ತಿಳಿಸಿದರು.

ಯಾವಾಗ ಬೈನಾನ್ಸ್ ಕಂಪನಿ ತನ್ನ ಸಮೀಪ ಸ್ಪರ್ಧಿ ಎಫ್‌ಟಿಎಕ್ಸ್ ನ್ನು ಖರೀದಿಸಲು ಮುಂದಾಯಿತೋ ಆವಾಗ ಎಲ್ಲವೂ ಕುಸಿಯಲು ಆರಂಭವಾಯಿತು. ಎಫ್‌ಟಿಎಕ್ಸ್‌ನ ಕರ್ಮಕಾಂಡಗಳ ಬಗ್ಗೆ ವದಂತಿ ರೂಪದಲ್ಲಿ ಸುದ್ದಿಗಳು ಹರಡಲು ಆರಂಭವಾಗಿವೆ. ಎಫ್‌ಟಿಎಕ್ಸ್‌ನಿಂದ ಕ್ರಿಪ್ಟೋ ಹಣವನ್ನು ಲಪಟಾಯಿಸಲಾಗಿದೆ. ಅದರ ಅಂಗ ಸಂಸ್ಥೆಯಾದ ಅಲಾಮೆಡಾ ರೀಸರ್ಚ್ ಕಂಪನಿಗೆ ಫಂಡ್‌ಗಳನ್ನು ರವಾನಿಸಲಾಗಿದೆ ಎಂಬಂತಹ ಸುದ್ದಿ ಹರಿದಾಡಿದವು.

ಎಫ್‌ಟಿಎಕ್ಸ್‌ನಲ್ಲಿ ತಮ್ಮ ಕ್ರಿಪ್ಟೋ ಹಣವನ್ನು ಜನರು ವಾಪಸ್ ಪಡೆಯಲು ಮುಂದಾದಾಗ ಜನರ ಹಣ ಹಿಂದಿರುಗಿಸಲು ಸಾಧ‍್ಯವಾಗುತ್ತಿಲ್ಲ ಎಂದು ಎಫ್‌ಟಿಎಕ್ಸ್ ಹೇಳುತ್ತಿದೆ. ಫಂಡಿಂಗ್‌ಗಾಗಿ ಹತಾಶೆಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯಾರೂ ಕೂಡ ಎಫ್‌ಟಿಎಕ್ಸ್‌ಗೆ ಫಂಡಿಂಗ್ ಕೊಡಲು ಮುಂದಾಗುತ್ತಿಲ್ಲದರ ಪರಿಣಾಮ ಅಮೆರಿಕದಲ್ಲಿ ಕಾನೂನು ಕ್ರಮವನ್ನು ಎಫ್‌ಟಿಎಕ್ಸ್ ಎದುರಿಸಬೇಕಾಗುತ್ತದೆ.

ಎಫ್‌ಟಿಎಕ್ಸ್ ಕೇಂದ್ರ ಕಚೇರಿ ಬಹಾಮಸ್‌ನಲ್ಲಿದೆ. ರಾಯಲ್ ಬಹಾಮಸ್ ಪೊಲೀಸ್ ಪಡೆ ಎಫ್‌ಟಿಎಕ್ಸ್‌ನ ಹಗರಣದ ತನಿಖೆ ನಡೆಸುತ್ತಿದೆ. ಅಮೆರಿಕದ ನ್ಯಾಯ ಮತ್ತು ಸೆಕ್ಯೂರಿಟಿ ಎಂಡ್ ಎಕ್ಸ್‌ಚೇಂಜ್ ಕಮಿಷನ್ ಇಲಾಖೆ ಕೂಡ ತನಿಖೆ ನಡೆಸುತ್ತಿದೆ.