ದೆಹಲಿ: ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ (DK Shivakumar) ಅವರು ಕೊನೆಗೂ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ (swearing-in ceremony) ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಕರ್ನಾಟಕದ ರಾಜ್ಯಪಾಲರಿಗೆ (governor) ಕಳೆದ ರಾತ್ರಿ ತಾವೇ ಖುದ್ದಾಗಿ ಪತ್ರ ಬರೆದಿರುವುದಾಗಿ ಶಿವಕುಮಾರ್ ಹೇಳಿದರು.
ಉಪಮುಖ್ಯಮಂತ್ರಿ ಸ್ಥಾನ ನೀಡಿರುವ ಬಗ್ಗೆ ತೃಪ್ತಿ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಅವರು ಆ ಪ್ರಶ್ನೆಗೆ ಉತ್ತರಿಸುವ ಬದಲು, ಜನರು ನಮಗೆ ದೊಡ್ಡ ಮ್ಯಾಂಡೇಟ್ ನೀಡಿದ್ದಾರೆ, ಅವರ ಆಸೆ ಆಶೋತ್ತರಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುವುದು ನಮ್ಮ ಕರ್ತವ್ಯವಾಗಿದೆ, ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.