ಬೆಂಗಳೂರು : ರಾಜ್ಯದ ಜನ್ರ ಸಂಚಾರಿ ಜೀವನಾಡಿ ಅಂದ್ರೆ ಅದು ಕೆಎಸ್ ಆರ್ ಟಿಸಿ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡೋಕೆ ಅಂತ ಹತ್ತಾರು ಯೋಜನೆಗಳನ್ನ ಜಾರಿಗೆ ತರುತ್ತಲೇ ಇರುತ್ತೆ.ಆದ್ರೆ ಇದೀಗ ಪ್ರಯಾಣಿಕರಿಗೆ ಹೈ- ಫೈ ಪ್ರಯಾಣದ ಸುಖ ನೀಡೋಕೆ ಪಲ್ಲಕ್ಕಿ ಉತ್ಸವ ಬಸ್ ಗಳನ್ನ ಪರಿಚಯಿಸಿದೆ. ಈಗಾಗಲೇ ರಾಜ್ಯಾದ್ಯಂತ ಬಸ್ ಗಳು ಸಂಚಾರ ಮಾಡುತ್ತಿದ್ದು, ಆರಂಭದಲ್ಲೇ ಗುಡ್ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಮತ್ತಷ್ಟು ಹೊಸ ಬಸ್ ಖರೀದಿಗೆ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಸಮ್ಮತಿ ನೀಡಿದೆ. ಹೀಗಾಗಿ ಶೀಘ್ರದಲ್ಲೇ ನಿಗಮಕ್ಕೆ 100 ಪಲ್ಲಕ್ಕಿ ಉತ್ಸವ ಬಸ್ ಗಳು ಸೇರ್ಪಣೆ ಆಗ್ತಿವೆ
ಶಕ್ತಿ ಯೋಜನೆ ಬಳಿಕ ರಾಜ್ಯ ಸಾರಿಗೆ ನಿಗಮಗಳಿಗೆ ಚೇತರಿಕೆ ಕಂಡಿವೆ. ಸದ್ಯ ಹೊಸ ಹೊಸ ಬಸ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಬಸ್ ಖರೀದಿಯತ್ತ ನಿಗಮಗಳು ಮುಖ ಮಾಡ್ತಿವೆ. ಸದ್ಯ ಕೆಎಸ್ಆರ್ ಟಿಸಿ ಕೋಟಿ ಕೋಟಿ ಖರ್ಚು ಮಾಡಿ, ವೋಲ್ವೋ, ಸ್ಕ್ಯಾನಿಯಾ, ಮಲ್ಟಿ ಆ್ಯಕ್ಸಲ್ .ಅಂಬಾರಿ ಉತ್ಸವ ಹೀಗೆ ಹೈ-ಫೈ ಬಸ್ ಗಳನ್ನ ಪ್ರಯಾಣಿಕರಿಗಾಗಿ ರಸ್ತೆಗಿಳಿಸಿದೆ. ಪ್ರಯಾಣಿಕರೂ ಇದ್ರ ಸುಖಾನುಭಪಡೆದು ಪ್ರಯಾಣ ಮಾಡ್ತಿದ್ದಾರೆ. ಆದ್ರೆ ಕೆಎಸ್ ಆರ್ ಟಿಸಿ ಇದೀಗ ಇನ್ನಷ್ಟು ಸ್ಮಾರ್ಟ್ ಮಾಡಿ ಪ್ರಯಾಣಿಕರನ್ನ ಸೆಳೆಯೋಕೆ ಮುಂದಾಗಿದೆ. ಈಗಾಗಲೇ ಹೊಸದಾಗಿ 40 ಪಲ್ಲಕ್ಕಿ ಉತ್ಸವ ಬಸ್ ಗಳನ್ನ ಖರೀದಿಸಿರುವ ನಿಗಮ, ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದು, ಪ್ರಯಾಣಿಕರಿಂದ ಗುಡ್ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಇದೇ ಮಾದರಿಯ ಮತ್ತಷ್ಟು ಬಸ್ ಗಳನ್ನಹ ರೋಡಿಗಿಳಿಸು ಮುಂದಾಗಿದೆ.
ಹೌದು ಅಕ್ಟೋಬರ್ 7 ರಂದು ಪಲ್ಲಕ್ಕಿ ಉತ್ಸವ ಬಸ್ ಗಳಿಗೆ ಚಾಲನೆ ಸಿಕ್ಕಿದೆ.ರಾಜ್ಯಾದೆಲ್ಲಡೆ ಈ ಬಸ್ ಸಂಚಾರ ಮಾಡುತ್ತಿದ್ದು, ಮತ್ತಷ್ಟು ಬಸ್ಗಳಿಗೆ ಬೇಡಿಕೆ ಬಂದಿದೆ. ಹೀಗಾಗಿ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಮತ್ತಷ್ಟು ಬಸ್ ಗಳನ್ನ ಖರೀದಿಗೆ ಮಾಡೋಕೆ ಅನುಮತಿ ನೀಡಿದೆ. ಶೀಘ್ರದಲ್ಲೇ 100 ಬಸ್ ಖರೀದಿಗೆ ಟೆಂಡರ ಕರೆಯಲಿದ್ದು, ಮೂರು ತಿಂಗಳೊಗೆ ಹೊಸ ಮಾದರಿಯ ಪಲ್ಲಕ್ಕಿ ಉತ್ಸವ ಬಸ್ ಗಳು ನಿಗನಮಕ್ಕೆ ಸೇರ್ಪಣೆಯಾಗ್ತವೆ ಅಂತ ಕೆಎಸ್ಆರ್ಟಿಸಿ ಎಂ. ಡಿ ಅನ್ಬುಕುಮಾರ್ ತಿಳಿಸಿದ್ದಾರೆ
ಈಗಾಗಲೇ ಸಂಚಾರ ಮಾಡ್ತಿರೋ ಪಲ್ಲಕ್ಕಿ ಉತ್ಸವ ಬಸ್ ನಲ್ಲೇ ಅತ್ಯಾಧುನಿಕ ವ್ಯವಸ್ಥೆ ಇದೆ. ವೈ-ಫೈ ಮೊಬೈಲ್ ಚಾರ್ಜಿಂಗ್, ಮೂವಿ ನೋಡುವ ಸೌಲಭ್ಯ ಬಸ್ ನಲ್ಲಿ ಕಲ್ಪಿಸಲಾಗಿದೆ.ಈಗಾಗಲೇ ಸ್ಲೀಪರ್ ಬಸ್ ಗಳು ಅಂತರಾಜ್ಯ ,ಅಂತರ ಜಿಲ್ಲೆ ವ್ಯಾಪ್ತಿಯಲ್ಲಿ ಓಡಾಟ ನಡೆಸುತ್ತಿದ್ದು, ಪ್ರಯಾಣಿಕ ಬೇಡಿಕೆ ಆಧಾರಿಸಿ ಮತ್ತಷ್ಟು ಬಸ್ ಗಳನ್ನ ರೋಡಿಗಿಳಿಸಲು ನಿಗಮ ಮುಂದಾಗಿದೆ.ಬೇರೆ ಬಸ್ ಬಸ್ ಗಳಿಗೆ ಹೋಲಿಕೆ ಮಾಡಿದರೆ ಪಲ್ಕಕ್ಕಿ ಉತ್ಸವ ಬಸ್ ಆರಾಮವಾಗಿ ಸಂಚಾರ ಮಾಡಬಹುದು. ಜನ ಹೆಚ್ಚಿನ ಹಣವನ್ನು ಪಾವತಿಸಲು ಸಿದ್ಧರಾಗಿದ್ದಾರೆ.ಬಸ್ ನಲ್ಲಿ, ಆರಾಮದಾಯಕ ಆಸನ ವ್ಯವಸ್ಥೆ ಸೇರಿದಂತೆ ಇತರೆ ಐಷಾರಾಮಿ ಸೇವೆಗಳು ಬಸ್ ನಲ್ಲಿ ಇವೆ. ಇದೀಗ ಮತ್ತಷ್ಟು ಬಸ್ ಗಳ ಖರೀದಿಗೆ ಅನುಮತಿ ಸಿಕ್ಕಿದೆ
ಒಟ್ನಲ್ಲಿ ಶಕ್ತಿ ಯೋಜನೆಯಿಂದ ಗೆದ್ದು ಬೀಗುತ್ತಿರುವ ಸಾರಿಗೆ ನಿಗಮಗಳು, ಮತ್ತಷ್ಟು ಸ್ಟ್ರಾಂಗ್ ಆಗಲು ಹೊಸ ಹೊಸ ಬಸ್ ಗಳ ಖರೀದಿಗೆ ಮುಂದಾಗಿದೆ,ಆದ್ರೆ ಮುಂದಿನ ದಿನಗಳಲ್ಲಿ ಇದೇ ಉತ್ಸಾಹ ಉತ್ಸವ ಬಸ್ ಗಳಿಗೆ ಸಿಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.