ಬೆಂಗಳೂರು: ಏಪ್ರಿಲ್ನಿಂದ ಜೂನ್ ಅವಧಿಯಲ್ಲಿ ಭಾರತವು ತೀವ್ರವಾದ ಬೇಸಿಗೆ ಅನುಭವಿಸಲಿದೆ. ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಕೆಟ್ಟ ಪರಿಣಾಮ ಎದುರಿಸುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕವು ಏಪ್ರಿಲ್ನಲ್ಲಿ ಸಾಮಾನ್ಯದ 1 ರಿಂದ 3 ದಿನಗಳ ಬದಲು 2 ರಿಂದ 8 ದಿನ ಉಷ್ಣ ಅಲೆಯನ್ನು ಅನುಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದ ಹೆಚ್ಚಿನ ಭಾಗಗಳಲ್ಲಿ ಹೆಚ್ಚು ಗರಿಷ್ಠ ತಾಪಮಾನವಿದ್ದು, ಪಶ್ಚಿಮ ಹಿಮಾಲಯ ಪ್ರದೇಶ, ಈಶಾನ್ಯ ರಾಜ್ಯಗಳು ಉತ್ತರ ಒಡಿಶಾದ ಕೆಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶವಿದೆ.ಬಯಲು ಸೀಮಿಯ ಬಹುತೇ ಭಾಗಗಳಲ್ಲೂ ಬಿಸಿಲ ಕಾಟವಿದ್ದು,ಈ ಬಾರಿ 20 ದಿನಗಳ ಕಾಲ ತಾಪಮಾನ ಏರಿಕೆ ಸಾಧ್ಯತೆ,
ಯಾವ್ಯಾವ ರಾಜ್ಯಗಳಿಗೆ ಆತಂಕ?
ಗುಜರಾತ್, ಮಧ್ಯ ಮಹಾರಾಷ್ಟ್ರ, ರಾಜಸ್ಥಾನ
ಉ.ಕರ್ನಾಟಕ, ಮಧ್ಯಪ್ರವೇಶ, ಒಡಿಶಾ
ಉತ್ತರ ಛತ್ತೀಸ್ಗಢ, ಆಂಧ್ರಪ್ರದೇಶ
ಪ.ಹಿಮಾಲಯ ಪ್ರದೇಶ, ಈಶಾನ್ಯ ರಾಜ್ಯಗಳು
ದೇಶದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನ
ಕರ್ನಾಟಕದಲ್ಲಿ 2ರಿಂದ 8 ದಿನ ಉಷ್ಣಾಂಶ ಹೆಚ್ಚಳ ಬಿಸಿಗಾಳಿಯ ಕೆಟ್ಟ ಪರಿಣಾಮಗಳನ್ನು ಕಾಣಬಹುದು ಎಂದು ಎಚ್ಚರಿಕೆ ನೀಡಿದೆ.