ಗದಗ: ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಸೇರಿದಂತೆ ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕಳುವಾಗಿದ್ದ ಬೈಕ್ ಕಳ್ಳತನ ಪ್ರಕರಣಗಳನ್ನು ಬೆಟಗೇರಿ ಬಡಾವಣೆ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನ ನಡೆಸಿ ಬೇಧಿಸಿದ್ದಾರೆ. ಪ್ರಕರಣ ಬೇಧಿಸಲು ಗದಗ ಎಸ್ಪಿ ಬಿ ಎಸ್ ನೇಮಗೌಡ, ಅಡಿಶನಲ್ ಎಸ್ಪಿ ಎಮ್.
ಬಿ. ಸಂಕದ, DYSP ಜಿ.ಎಚ್.ಇನಾಮದಾರ ಮಾರ್ಗದರ್ಶನದಲ್ಲಿ ಬೆಟಗೇರಿ ವೃತ್ತದ ಸಿಪಿಐ ಧೀರಜ್ ಸಿಂಧೆ ನೇತೃತ್ವದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಮಾರುತಿ ಜೋಗದಂಡಕರ,
ಪಿ.ಎಸ್.ಐ. ಬಿ. ಟಿ. ರಿತ್ತಿ, ಎ.ಎಸ್.ಐ ಎನ್. ಎಫ್. ಬೆಟಗೇರಿ, ಸಿಬ್ಬಂದಿಗಳಾದ ಪಿ.ಎಚ್.ದೊಡಮನಿ, ಅಶೋಕ ಗದಗ, ನಾಗರಾಜ ಬರಡಿ, ಎಸ್.ಎಚ್.ಕಮತರ, ಮಹೇಶ ಹೂಗಾರ, ಅಕ್ಷಯ ಬದಾಮಿ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಎ.ಆರ್.ಎಸ್.ಐ ಗುರುರಾಜ ಬೂದಿಹಾಳ, ಸಿಪಿಸಿ ಸಂಜೀವ್ ಕೊರಡೂರ ಒಳಗೊಂಡ ತಂಡವನ್ನು ರಚಿಸಿಲಾಗಿತ್ತು.
ಅದರಂತೆ ಕಾರ್ಯಾಚರಣೆಗಿಳಿದ ತಂಡ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ: 75/2024 ಐಪಿಸಿ ಕಲಂ: 303(2)ರ ಪ್ರಕರಣ ಬೇಧಿಸಿದ್ದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ ವಶಕ್ಕೆ ಪಡೆದು, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 02, ಹೊಸಪೇಟೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 02, ತೋರಣಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 03.
ಬಳ್ಳಾರಿ ಕೌಲ್ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 04 ಮತ್ತು ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 01 ಸೇರಿದಂತೆ ಒಟ್ಟು 4,40,000 ರೂಪಾಯಿ ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ತನಿಖೆಯನ್ನ ಮುಂದುವರೆಸಿದ್ದಾರೆ. ಕಳ್ಳತನವಾದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಗದಗ ಎಸ್.ಪಿ ಬಿ ಎಸ್ ನೇಮಗೌಡ ಶ್ಲಾಘಿಸಿದ್ದಾರೆ.