ನವದೆಹಲಿ: ಸೆಪ್ಟೆಂಬರ್ 19ರಿಂದಲೇ ಈ ಗಣೇಶ ಹಬ್ಬಜೋರಾಗಿದ್ದು, ದೇಶಾದ್ಯಂತ ಮಕ್ಕಳು ಹಿರಿಯರಾದಿಯಾಗಿ ಗಣೇಶನನ್ನು ಸ್ವಾಗತಿಸಲು ಉತ್ಸಾಹದಿಂದ ಸಜ್ಜಾಗಿದ್ದರು. ಗಣೇಶ ಚತುರ್ಥಿಯ ದಿನ ಜನ ಮನೆಯಲ್ಲಿ ಗಣೇಶನನ್ನು ಕೂರಿಸಿ ಆತನಿಗೆ ಮೋದಕ ಲಡ್ಡು (Laddu)ಮುಂತಾದ ಸಿಹಿಗಳನ್ನು ಮಾಡಿ ಆತ ಸಂತುಷ್ಟನಾಗಬೇಕೆಂದು ಬಯಸುತ್ತಾರೆ. ಅದೇ ರೀತಿ ಇಲ್ಲಿ ಇಂಡಿಗೋ ಗಣೇಶ (Ganesh) ಮೋದಕ ಇರುವ ಪಾತ್ರೆಯನ್ನು ಹಿಡಿದು ವಿಮಾನದ ಸೀಟಿನಲ್ಲಿ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಇದು ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಿದ ಫೋಟೋ ಆಗಿದ್ದು, ಬಪ್ಪ ಮನೆಗೆ ಬರುತ್ತಿದ್ದಾನೆ ಎಂದು ಬರೆದು ಈ ಪೋಟೋವನ್ನು ಶೇರ್ ಮಾಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ. ಇಂಡಿಗೋ ವಿಮಾನದ (Indigo Flight) ವಿಂಡೋ ಸೈಡ್ ಸೀಟಿನಲ್ಲಿ ಕುಳಿತಿರುವ ಗಣೇಶ ಮಡಿಲಲ್ಲಿ ದೊಡ್ಡ ಬಟ್ಟಲಿನಲ್ಲಿ ಮೋದಕವನ್ನು ಇರಿಸಿಕೊಂಡಿದ್ದಾನೆ. ಈ ಫೋಟೋ ನೋಡಿದ ಬಹುತೇಕರು ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ.