ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಮನಾಮ ಪಠಿಸಿದ್ದಾರೆ. ಈ ಮೂಲಕ ಇನ್ನೂ ಇಬ್ಬರು ಸೆಲೆಬ್ರಿಟಿಗಳಿಗೂ ರಾಮನಾಮ ಪಠಿಸಲು ಆಹ್ವಾನ ನೀಡಿದ್ದಾರೆ. ಭಗವಾನ್ ಶ್ರೀರಾಮನ ನಾಮ ಪಠಿಸಿದ ವಿಡಿಯೋವೊಂದನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಕನ್ನಡದ ಸಿನಿತಾರೆಯರು ಮತ್ತು ಬಾಲಿವುಡ್ ಕಲಾವಿದರು ಸೇರಿದಂತೆ ಅನೇಕರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಭಿಯಾನವೊಂದು ಶುರುವಾಗಿದೆ. ಬಿ.ವೈ ವಿಜಯೇಂದ್ರ ಅವರ ಆಹ್ವಾನ ಮೇರೆಗೆ ಗಣೇಶ್ ರಾಮನಾಮ ಪಠಿಸಿದ್ದಾರೆ. ಈ ಶ್ರೀರಾಮನ ನಾಮ ಜಪಿಸಲು ಇನ್ನೂ ಇಬ್ಬರು ಸ್ಟಾರ್ಗಳಿಗೆ ಆಹ್ವಾನ ನೀಡಿದ್ದಾರೆ
ಶ್ರೀರಾಮನ ನಾಮ ಪಠಿಸಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅನಿಲ್ ಕುಂಬ್ಳ ಅವರಿಗೆ ಗಣೇಶ್ ಆಹ್ವಾನ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟ ಗಣೇಶ್ ತಿಳಿಸಿದ್ದಾರೆ. ಈ ವಿಡಿಯೋ ನೋಡ್ತಿದ್ದಂತೆ ಅಭಿಮಾನಿಗಳು ಜೈ ಶ್ರೀರಾಮ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.