ಆನೇಕಲ್(ತಮಿಳುನಾಡು): ಕರ್ನಾಟಕದ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ಹೈಕೋರ್ಟ್ ಸೆಟ್ ಹಾಕಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಹೈಕೋರ್ಟ್ನಲ್ಲಿ ಜಡ್ಜ್, ವಕೀಲ, ಗುಮಾಸ್ತ ಎಲ್ಲವೂ ಗಣೇಶ. ಕರ್ನಾಟಕ ಗಡಿಭಾಗ ಹೊಸೂರಿನಲ್ಲಿ ಹೈಕೋರ್ಟ್ ಸೆಟ್ ಹಾಕಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.
ಕೋರ್ಟ್ ನಲ್ಲಿ ಆರೋಪಿಯಾದ ಮೂಷಿಕ ವಾಹನ ಅದ್ದೂರಿ ಹೈಕೋರ್ಟ್ ಥೀಮ್ ಸೆಟ್ ನಲ್ಲಿ ಗಣೇಶ ಪ್ರತಿಷ್ಠಾಪನೆ ಹೊಸೂರಿನ ಶ್ರೀನಗರದಲ್ಲಿ ಹೈ ಕೋರ್ಟ್ ಮಾದರಿಯ ಸೆಟ್ ನಿರ್ಮಾಣ ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು
ಬರೊಬ್ಬರಿ ಏಳು ಲಕ್ಷ ರೂಪಾಯಿ ಖರ್ಚು ಮಾಡಿ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಲಾಗಿದೆ. ಜಿಗಣಿಯ ಉದಯ್ ಕುಮಾರ್ ತಂಡದಿಂದ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಿದೆ. ಇಪ್ಪತ್ತೈದು ದಿನದಲ್ಲಿ ಹೈಕೋರ್ಟ್ ಸೆಟ್ ನಿರ್ಮಾಣ ಮಾಡಲಾಗಿದೆ. ಇದೇ ಶ್ರೀನಗರದಲ್ಲಿ ಕಳೆದ ವರ್ಷ ಪೊಲೀಸ್ ಠಾಣೆ ಸೆಟ್ ಹಾಕಲಾಗಿತ್ತು.ಎಲ್ಲಾ ಪಾತ್ರಧಾರಿಗಳಲ್ಲು ಗಣಪತಿ ಮೂರ್ತಿಗಳ ಪ್ರಮುಖ ಪಾತ್ರ ಹದಿನಾರಕ್ಕೂ ಹೆಚ್ಚು ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಹೊರಗೆ ಪೋಲಿಸ್ ಜೀಪ್ ಸೇರಿದಂತೆ ಸಂಪೂರ್ಣ ಕೋರ್ಟ್ ಸೆಟ್ ನಿರ್ಮಾಣ ಹೊಸೂರು
ಹೈಕೋರ್ಟ್ ಮಾದರಿ ಸೆಟ್ ಅನ್ನು ನೋಡಲು ಹೊಸೂರು, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಜನರು ಬರುತ್ತಿದ್ದಾರೆ. ಸೆಟ್ ನಿರ್ಮಾಣ ಮಾಡಿದ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ್ದಾರೆ.