ಅಪ್ರಾಪ್ತ ಬಾಲಕಿ ಮೇಲೆ ಐವರಿಂದ ಸಾಮೂಹಿಕ ರೇಪ್ ನಡೆದ ಘಟನೆ ಐಎಸ್ಬಿಟಿ ಬಸ್ನಲ್ಲಿ ಜರುಗಿದೆ. ಮೊರಾದಾಬಾದ್ನಿಂದ ಡೆಹ್ರಾಡೂನ್ಗೆ ಹೊರಟಿದ್ದ ಅಪ್ರಾಪ್ತ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆಗಸ್ಟ್ 13 ರಂದು ನಡೆದಿದೆ ಎನ್ನಲಾಗಿದೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹುಡುಗಿ ಮೊರಾದಾಬಾದ್ನಿಂದ ಯುಪಿ ರೋಡ್ವೇಸ್ ಬಸ್ಗೆ ಏರಿದ್ದಳು. ಅವಳು ಆಗಸ್ಟ್ 13 ರಂದು ಮಧ್ಯರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕಿ ಪಂಜಾಬ್ ನಿವಾಸಿ ಎಂದು ಹೇಳಲಾಗಿದೆ. ಅವಳು ಪಂಜಾಬ್ನಿಂದ ದೆಹಲಿಗೆ ಮತ್ತು ಅಲ್ಲಿಂದ ಮೊರಾದಾಬಾದ್ಗೆ ಬಂದಿದ್ದಳು.
ಮಕ್ಕಳ ಕಲ್ಯಾಣ ಸಮಿತಿಯು ಐಎಸ್ಬಿಟಿ ಪೊಲೀಸ್ ಪೋಸ್ಟ್ಗೆ ವರದಿ ಸಲ್ಲಿಸಿತು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಕೂಡ ಐಎಸ್ಬಿಟಿ ಪೋಸ್ಟ್ಗೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಅವರ ಸೂಚನೆ ಮೇರೆಗೆ ಪೊಲೀಸರು ನಾಲ್ವರು ಅಪರಿಚಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಬಸ್ ಖಾಲಿಯಾದ ಬಳಿಕ ಐವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಳಿಕ ಆರೋಪಿಗಳು ಬಾಲಕಿಯನ್ನು ಬಸ್ನಿಂದ ಕೆಳಗಿಳಿಸಿ ತೆರಳಿದ್ದರು. ಮಕ್ಕಳ ಕಲ್ಯಾಣ ಸಮಿತಿಯು ಸಂಕಷ್ಟ ಸ್ಥಿತಿಯಲ್ಲಿದ್ದ ಅವರನ್ನು ರಕ್ಷಿಸಿದ್ದಾರೆ