ಲಕ್ನೋ: 10 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಆತನ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿ ಕಾನ್ಸ್ಟೇಬಲ್ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಈ ವೇಳೆ ಪೊಲೀಸ್ ಅಧಿಕಾರಿಗಳು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಮನೆಗೆ ಬಿಡುವ ನೆಪದಲ್ಲಿ ವ್ಯಕ್ತಿ ಮತ್ತು ಆತನ ಸಹಚರರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು.
ಸಂತ್ರಸ್ತೆ ತಾಯಿ ನೀಡಿದ ದೂರಿನ ಪ್ರಕಾರ, ಹುಡುಗಿ ಗಾಜಿಯಾಬಾದ್ನ ಲೋನಿಯಲ್ಲಿರುವ ತನ್ನ ಮನೆಗೆ ಮದುವೆಯ ಮೆರವಣಿಗೆ ವೀಕ್ಷಿಸಲು ಹೋಗಿದ್ದಳು. ಇಬ್ಬರು ಪುರುಷರು ತಮ್ಮ ಕಾರಿನಲ್ಲಿ ಅವಳನ್ನು ಮನೆಗೆ ಬಿಡುವುದಾಗಿ ಹೇಳಿದರು. ನಂತರ ನಜೀಮ್ ಮತ್ತು ಜಾಕೀರ್ ಎಂದು ಗುರುತಿಸಲಾದ ವ್ಯಕ್ತಿಗಳು ಚಲಿಸುತ್ತಿದ್ದ ವಾಹನದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ ಸೂರ್ಯಬಲಿ ಮೌರ್ಯ ತಿಳಿಸಿದ್ದಾರೆ. ಬಿಜೆಪಿಯ ಸ್ಥಳೀಯ ಶಾಸಕ ನಂದ ಕಿಶೋರ್ ಗುರ್ಜರ್ ಅವರು, ಇಂತಹ ಅಪರಾಧಗಳಿಗೆ ಕಾರಣರಾದವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಅಂಥವರನ್ನು ಯಮಲೋಕಕ್ಕೆ (ನರಕಕ್ಕೆ) ಕಳುಹಿಸಬೇಕು. ಅವರ ಮನೆಗಳನ್ನು ಸಹ ಕೆಡವಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.