ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದಿದ್ದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಜೂನ್ 29 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ತಂಡ 7 ರನ್ಗಳಿಂದ ಗೆಲುವು ಪಡೆದಿತ್ತು.
ಮೂಲಕ 17 ವರ್ಷಗಳ ಬಳಿಕ ಭಾರತ ತಂಡ ಎರಡನೇ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಅಲ್ಲದೆ 11 ವರ್ಷಗಳ ಬಳಿಕ ಭಾರತ ತಂಡ ಐಸಿಸಿ ಟ್ರೋಫಿಗೆ ಮುತ್ತಿಟ್ಟಿತು.
ಕ್ಯಾಚ್ ಪಡೆಯುವ ವೇಳೆ ಸೂರ್ಯ ಕ್ಯಾಚ್ ಪಡೆದರೂ ಬ್ಯಾಲೆನ್ಸ್ ಕಳೆದುಕೊಂಡಿದ್ದರು ಹಾಗೂ ಚೆಂಡನ್ನು ಮೇಲಕ್ಕೆ ಹಾಕಿ ಬೌಂಡರಿ ಲೈನ್ ದಾಟಿದ್ದರು. ಆದರೆ, ಪುನಃ ಮೈದಾನಕ್ಕೆ ಮರಳಿದ ಸೂರ್ಯಕುಮಾರ್ ಯಾದವ್ ಗಾಳಿಯಲ್ಲಿದ್ದ ಚೆಂಡನ್ನು ಪಡೆಯುವಲ್ಲಿ ಯಶಸ್ವಿಯಾದರು. ಫೀಲ್ಡ್ ಅಂಪೈರ್ಗಳು ಔಟ್ ನೀಡುವುದಕ್ಕೂ ಮುನ್ನ ಮೂರನೇ ಅಂಪೈರ್ ಸಹಾಯವನ್ನು ಪಡೆದರು. ಮೂರನೇ ಅಂಪೈರ್ ವಿಡಿಯೋ ರೀಪ್ಲೆನಲ್ಲಿ ಹೆಚ್ಚಿನ ಆಂಗಲ್ನಲ್ಲಿ ಪರಿಶೀಲಿಸದೆ ಔಟ್ ಕೊಟ್ಟಿದ್ದರು.
ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸೂರ್ಯಕುಮಾರ್ ಯಾದವ್ ಅವರು ಕ್ಯಾಚ್ ಪಡೆಯುವ ಮೂಲಕ ಬೌಂಡರಿ ಲೈನ್ಗೆ ತಾಗಿಸಿದ್ದರು ಎಂಬ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು
ಸ್ಪೋರ್ಟ್ಸ್ ಸ್ಟಾರ್ನಲ್ಲಿ ಬರೆದಿರುವ ಅಂಕಣದಲ್ಲಿ ಸುನೀಲ್ ಗವಾಸ್ಕರ್, ಸೂರ್ಯಕುಮಾರ್ ಯಾದವ್ ಕ್ಯಾಚ್ನ ನ್ಯಾಯೋಚಿತತೆಯನ್ನು ಹೆಚ್ಚಿಸಿದ ಆಸ್ಟ್ರೇಲಿಯಾದ ಪತ್ರಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಅವರನ್ನು ಸಮರ್ಥಿಸಿಕೊಂಡರು ಮತ್ತು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
“ಟಿ20 ವಿಶ್ವಕಪ್ ಫೈನಲ್ಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿದ್ದ ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ನ ನ್ಯಾಯಯೋಚಿತತೆಯನ್ನು ಆಸ್ಟ್ರೇಲಿಯಾ ಸುದ್ದಿ ಪತ್ರಿಕೆಗಳು ಪ್ರಶ್ನೆ ಮಾಡಿದ್ದವು. ಸೂರ್ಯಕುಮಾರ್ ಅವರು ಅಸಾಧಾರಣ ಕ್ಯಾಚ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬೌಂಡರಿ ಲೈನ್ ಬಳಿ ಸೂರ್ಯ ಅದ್ಭುತವಾಗಿ ಬ್ಯಾಲೆನ್ಸ್ ಮಾಡಿದ್ದರು. ಬೌಂಡರಿ ಲೈನ್ಗೆ ತಾಗದೆ ಗಾಳಿಯಲ್ಲಿಯೇ ಚೆಂಡಿಕೊಂದಿಗೆ ಆಟವಾಡಿದ್ದರು. ಇದು ಅದ್ಭುತ ಕ್ಯಾಚ್,” ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.