‘ಗೀತಾ’ ಧಾರವಾಹಿಯ ಮೂಲಕ ಖ್ಯಾತಿ ಘಳಿಸಿರುವ ನಟ ಧನುಷ್ ಗೌಡ ಮದುವೆ ಸಂಭ್ರದಲ್ಲಿದ್ದಾರೆ. ಧನುಷ್ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗುತ್ತಿದ್ದು, ಅತ್ತೆಯ ಮಗಳು ಸಂಜನಾ ಜೊತೆ ಹಸೆಮಣೆ ಏರಲು ಧನುಷ್ ರೆಡಿಯಾಗಿದ್ದಾರೆ.
ಧನುಷ್ ಹಾಗೂ ಸಂಜನಾ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮೆಹೆಂದಿ ಶಾಸ್ತ್ರ, ಬಳೆ ಶಾಸ್ತ್ರ ಸೇರಿದಂತೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯುತ್ತಿದೆ.
ಕಳೆದ ಡಿಸೆಂಬರ್ನಲ್ಲಿ ಧನುಷ್ ಅವರು ಅತ್ತೆ ಮಗಳು ಸಂಜನಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಬೆಂಗಳೂರಿನ ರೆಸಾರ್ಟ್ವೊಂದರಲ್ಲಿ ಈ ನಿಶ್ಚಿತಾರ್ಥ ನೆರವೇರಿತ್ತು. ಈಗ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.