ಬೆಂಗಳೂರು: ಗೀತಾ ಅವರು ಬಂಗಾರಪ್ಪನವರ ಮಗಳು ಹೀಗಾಗಿ ಕಾಂಗ್ರೆಸ್ ಸೇರಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ (Minister Ashok) ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗೀತಾ ಶಿವರಾಜ ಕುಮಾರ್(Geeta Shivraj Kumar) ಅವರ ಪಕ್ಷ ಸೇರ್ಪಡೆ ಇದೇ ಮೊದಲೇನಲ್ಲ. ಅವರ ಸಹೋದರ ರಾಜಕೀಯಕ್ಕೆ ಬಂದಾಗಲೇ ಅವರಿಗೂ ಆಸೆ ಇತ್ತು. ಆಗಲೂ ಅವರು ರಾಜಕೀಯ ಪಕ್ಷವೊಂದನ್ನು ಸೇರಿದ್ದರು ಎಂದರು. ಡಾ.ರಾಜಕುಮಾರ್ ಅವರಾಗಲಿ,
ಡಾ.ಪುನೀತ್ ರಾಜಕುಮಾರ್ ಅವರಾಗಲಿ ರಾಜಕೀಯಕ್ಕೆ ಬಂದವರಲ್ಲ. ರಾಜಕೀಯ ಕುರಿತು ಯಾವತ್ತೂ ಮಾತನಾಡಿಲ್ಲ. ಗೀತಾ ಶಿವರಾಜಕುಮಾರ್ ರಾಜಕುಮಾರ್ ಅವರ ಸೊಸೆಯಾದರೂ ಸಹ ಅವರು ಮಾಜಿ ಸಿಎಂ ಎಸ್. ಬಂಗಾರಪ್ಪನವರ ಪುತ್ರಿ. ಅವರಿಗೆ ಮೊದಲಿಂದಲೂ ರಾಜಕೀಯದ ಆಸೆ ಇತ್ತು. ಅವರು ಹೊಸದಾಗೇನು ಪಕ್ಷ ಸೇರಿಲ್ಲ. ಇದಕ್ಕೂ ರಾಜಕುಮಾರ್ ಅವರ ಕುಟುಂಬಕ್ಕೂ ಏನು ಸಂಬಂಧ ಇಲ್ಲ ಎಂದು ಹೇಳಿದ್ದಾರೆ.