ಬೆಂಗಳೂರು:- ಭೂ ವಿಜ್ಞಾನಾಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಕಿರಣ್ ಕೊಲೆ ಮಾಡಿದ್ದು 5 ಲಕ್ಷ ಹಣಕ್ಕಾಗಿ. ಪೊಲೀಸರ ವಿಚಾರಣೆಯಲ್ಲಿ ಸುಳ್ಳು ಹೇಳಿಕೆ ನೀಡಿದ್ದ. ಕಿರಣ್ ಸ್ನೇಹಿತ ಶಿವು ಎಂಬಾತನಿಂದ ಅಸಲಿ ಕಹಾನಿ ಬಯಲಾಗಿದೆ. ಮೊದಲಿಗೆ ಕೋಪಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ಕಿರಣ್ ಹೇಳಿಕೆ ನೀಡಿದ್ದರು.
ಕೆಲಸದಿಂದ ತೆಗೆದಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾಗಿ ಹೇಳಿದ್ದ. ಕ್ಷಮೆ ಕೇಳಿ ಮತ್ತೆ ಕೆಲಸಕ್ಜೆ ಸೇರಿಸಿಕೊಳ್ಳಲು ಕೇಳಲು ಹೋಗಿದ್ದೆ. ಆದ್ರೆ ಇದಕ್ಕೆ ಒಪ್ಪದಿದ್ದಾಗ ಕೊಲೆ ಮಾಡಿದ್ದಾಗಿ ಆರೋಪಿ ಕಿರಣ್ ಹೇಳಿದ್ದ.
ನಂತರ ಅಲ್ಲಿಯೇ ಇದ್ದ ಹದಿನೈದು ಸಾವಿರದಿಂದಿಗೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗಿ ಹೇಳಿಕೆ ನೀಡಿದ್ದ. ಇದೀಗ ಕೊಲೆಯ ಹಿಂದಿನ ಅಸಲಿ ಕಹಾನಿಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ತಲಘಟ್ಟಪುರ ಇನ್ಸ್ಪೆಕ್ಟರ್ ಜಗದೀಶ್ ನೇತ್ರತ್ವದಲ್ಲಿ ನಡೆದಿದ್ದ ತನಿಖೆ ನಡೆದಿದೆ. ಕೊಲೆ ಬಳಿಕ ಮನೆಯಲ್ಲಿ ಇದ್ದ ಹಣ ಮತ್ತು ಚಿನ್ನ ದೋಚಿ ಆರೋಪಿ ಎಸ್ಕೇಪ್ ಆಗಿದ್ದ.
ಜೊತೆಗೆ ಪ್ರತಿಮಾ ಕೈಯಲ್ಲಿದ್ದ ಎರಡು ಚಿನ್ನದ ಬಳೆ ಒಂದು ಚಿನ್ಬದ ಬ್ರೇಸ್ಲೆಟ್ ದೋಚಿದ್ದ. ಮೂರೆ ವರೆ ಇಂದ ನಾಲ್ಕು ಲಕ್ಷ ಮೌಲ್ಯದ ಚಿನ್ನ ದೋಚಿದ್ದ.. ಹಣ ಮನೆಯಲ್ಲಿದ್ದ ವಿಚಾರ ಕಿರಣ್ ಗೆ ಮುಂಚಿತವಾಗಿಯೆ ಗೊತ್ತಿತ್ತು. ಹಣವನ್ನು ಕೋಣನ ಕುಂಟೆ ಬಳಿಯ ಗೆಳಯ ಶಿವು ನಿವಾಸದಲ್ಲಿ ಇಟ್ಟಿದ್ದ ಕಿರಣ್ ನನಗೆ ಯಾರೊ ಕೊಡಬೇಕಿತ್ತು ನಿಮ್ಮ ಮನೆಯಲ್ಲಿ ಇರ್ಲಿ. ನಾನು ಮಹದೇಶ್ವರ ಬೆಟ್ಟ ಹೋಗಿ ಬಂದ ಮೇಲೆ ತೆಗೆದುಕೊಂಡು ಹೋಗ್ತಿನಿ ಎಂದಿದ್ದ…
ಕಿರಣ್ ಬಂಧನದ ನಂತರ ಪೊಲೀಸರ ಬಳಿ ಹಣದ ಸಮೇತ ಬಂದಿದ್ದ ಶಿವು, ಆದ್ರೆ ಹಣ ಎಲ್ಲಿಂದ ಬಂತು ಎಂಬುದು ಶಿವುಗೆ ಗೊತ್ತಿರಲಿಲ್ಲ. ಹೀಗಾಗಿ ವಿಚಾರಣೆ ವೇಳೆ ಐದು ಲಕ್ಷ ಹಣದ ವಿಚಾರವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ. ಹಣಕ್ಕಾಗಿ ಪ್ಲಾನ್ ಮಾಡಿಯೇ ಮನೆ ನುಗ್ಗಿ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಹಂತದಲ್ಲಿ ಸುಳ್ಳು ಸುಳ್ಳು ಹೇಳಿಕೆ ನೀಡಿದ್ದ ಆರೋಪಿ, ಕೊಲೆ ಮಾಡಲಿಕ್ಕೆ ಆಯುಧ ತಂದಿರಲಿಲ್ಲಾ ಬದಲಾಗಿ ಕೊಲೆ ಮಾಡುವ ಪ್ಲಾನ್ ಮಾಡಿಕೊಂಡಿದ್ದ ಕಿರಣ್ ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ.
ಹಣ ತಂದು ಕೊಟ್ಟಿದ್ದ ಕಾರಣಕ್ಜೆ ಕಿರಣ್ ಸ್ನೇಹಿತ ಶಿವುನನ್ನ ಸಾಕ್ಷಿಯಾಗಿ ಪರಿಗಣಿಸಿರುವ ಪೊಲೀಸರು, ಸದ್ಯ ಆರೋಪಿ ಕಡೆಯಿಂದ ಐದು ಲಕ್ಷ ನಗದು ಮತ್ತು ಚಿನ್ನ ವಶಕ್ಕೆ ಪಡೆದಿದ್ದಾರೆ.