ಜರ್ಮನಿಯು ಅಫ್ಘಾನಿಸ್ತಾನ ಹಾಗೂ ಸಿರಿಯ ಸೇರಿದಂತೆ ದೇಶದಲ್ಲಿ ಆಶ್ರಯ ಪಡೆದಿರುವ ಕ್ರಿಮಿನಲ್ ಹಿನ್ನೆಲೆಯ ವಲಸಿಗರನ್ನು ಗಡಿಪಾರು ಮಾಡಲಿದೆಯೆಂದು ಚಾನ್ಸಲರ್ ಓಲಾಫ್ ಶೋಲ್ಝ್ ತಿಳಿಸಿದ್ದಾರೆ.
ಜರ್ಮನ್ ಸಂಸತ್ನಲ್ಲಿ ಗುರುವಾರ ಭದ್ರತೆಯನ್ನು ಕೇಂದ್ರಬಿಂದುವಾಗಿಸಿ ಮಾಡಿದ ಭಾಷಣದಲ್ಲಿ ಈ ವಿಷಯವನ್ನು ಅವರು ತಿಳಿಸಿದರು. ಕಳೆದ ವಾರ ಅಫ್ಘಾನ್ ವಲಸಿಗನೊಬ್ಬ ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆಯ ಬಳಿಕ ಈ ಕ್ರಮದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆಶ್ರಯ, ರಕ್ಷಣೆ ಕೋರಿ ಬಂದ ವ್ಯಕ್ತಿಯು ಅತ್ಯಂತ ಗಂಭೀರವಾದ ಅಪರಾಧಗಳನ್ನು ಎಸಗಿದಾಗ ನನಗೆ ಆಕ್ರೋಶ ಬರುತ್ತದೆ. ಇಂತಹ ಕ್ರಿಮಿನಲ್ಗಳನ್ನು ಗಡಿಪಾರು ಮಾಡಲಾಗುವುದು ಎಂದು ಚಾನ್ಸಲರ್ ಹೇಳಿದರು.
29 ವರ್ಷದ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ ಆರೋಪಿಯು 25 ವರ್ಷದ ಅಫ್ಘಾನ್ ನಿರಾಶ್ರಿತನಾಗಿದ್ದು, ಆತ 2014ರಲ್ಲಿ ಆಶ್ರಯ ಕೋರಿ ಜರ್ಮನಿಗೆ ವಲಸೆ ಬಂದಿದ್ದ ಎನ್ನಲಾಗಿದೆ.