ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲದ ವಾಸನೆಗೆ ಕೈನಾಯಕರು ಥಂಡಾ ಹೊಡೆದಂತೆ ಕಾಣ್ತಿದೆ..ನಮ್ಮ ಅಸಮಾಧಾನಿತ ಶಾಸಕರನ್ನ ಎಲ್ಲಿ ಸೆಳೆದುಬಿಡ್ತಾರೋ ಎಂಬ ಭಯದಲ್ಲಿ ಅವರನ್ನ ಮನವೊಲಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ..ಮೂರು ಹೊಸ ಹುದ್ದೆಗಳನ್ನ ಕ್ರಿಯೇಟ್ ಮಾಡುವ ಮೂಲಕ ಅಸಮಾಧಾನಿತರ ಶಮನಕ್ಕೆ ಬ್ರೇಕ್ ಹಾಕಿದ್ದಾರೆ. ಬಿಜೆಪಿ ಸಭೆಯಲ್ಲಿ ನಡೆದ ಒಂದೇ ಒಂದು ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಥಂಡಾ ಹೊಡೆದಿದ್ದಾರೆ..
ಅಸಮಾಧಾನಿತ ಕಾಂಗ್ರೆಸ್ ಶಾಸಕರನ್ನ ಕರೆತನ್ನಿ ಅನ್ನೋ ಒಂದೇ ಒಂದು ಸೂಚನೆ ಕೈ ನಾಯಕರನ್ನ ಅಲರ್ಟ್ ಮಾಡಿದೆ..ಎಲ್ಲಿ ತಮ್ಮಲ್ಲಿರುವ ಅಸಮಾಧಾನಿತ ಶಾಸಕರನ್ನ ಸೆಳೆದು ಸರ್ಕಾರಕ್ಕೆ ಥ್ರೆಟ್ ಕೊಡ್ತಾರೋ ಅನ್ನೋ ಭಯದಿಂದ ತಮ್ಮ ಅಸಮಾಧಾನಿತ ಶಾಸಕರನ್ನ ಮನವೊಲಿಕೆ ಮಾಡೋಕೆ ಪ್ರಯತ್ನ ನಡೆಸಿದ್ದಾರೆ..ಯಾರು ಪಕ್ಷ ಹಾಗೂ ಸರ್ಕಾರದ ವಿರುದ್ಧ ಸಿಡಿದು ನಿಲ್ತಿದ್ರೋ ಅಂತವರನ್ನ ಹಿಡಿದು ನಿಲ್ಲಿಸೋಕೆ ಪ್ಲಾನ್ ರೂಪಿಸಿದ್ದಾರೆ..ಅದ್ರಂತೆ ಸರ್ಕಾರದಲ್ಲಿ ಮೂರು ಹೊಸ ಹುದ್ದೆಗಳನ್ನ ರಾತ್ರೋರಾತ್ರಿ ಸೃಷ್ಟಿ ಮಾಡಿ ಮೂವರಿಗೆ ಹಂಚಿದ್ದಾರೆ..ಅಧಿಕೃತವಾಗಿ ಅದೇಶವನ್ನೂ ಹೊರಡಿಸಿದ್ದಾರೆ..
ಸರ್ಕಾರ ಬಂದಾಗಿನಿಂದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿರುಗಿಬಿದ್ದಿದ್ರು..ಸರ್ಕಾರದ ನಡೆಗೆ ತೀರ್ವ ಆಕ್ಷೇಪ ಹೊರಹಾಕ್ತಿದ್ರು..ಇನ್ನು ಬಿ.ಆರ್.ಪಾಟೀಲ್ ಕೂಡ ಪದೇ ಪದೇಬೇರೆ ವಿಚಾರಗಳಲ್ಲಿ ಸಿಎಂಗೆ ಲೆಟರ್ ಬರೆದು ಎಚ್ಚರಿಕೆ ರವಾನಿಸ್ತಿದ್ರು..ಇದು ಎಷ್ಟರ ಮಟ್ಟಿಗೆ ಸರ್ಕಾರ ಹಾಗೂ ಪಕ್ಷಕ್ಕರ ಡ್ಯಾಮೇಜ್ ಮಾಡಿತ್ತು ಅಂದ್ರೆ ಹೇಳೋಕೆ ಆಗ್ತಿರಲಿಲ್ಲ..ಹೈಕಮಾಂಡ್ ಮಧ್ಯಪ್ರವೇಶಿಸಿದ ಇವರನ್ನ ತಣ್ಣಗೆ ಮಾಡಿತ್ತು..ಆದ್ರೂ ಇಬ್ರೂ ಒಳಗೊಳಗೆ ಕುದಿಯುತ್ತಲೇ ಇದ್ರು..
ಇವರನ್ನ ಸೆಳೆಯುವ ಪ್ರಯತ್ನವನ್ನ ಬಿಜೆಪಿ ನಾಯಕರು ಆರಂಭಿಸಿದ್ರು..ಇದೀಗ ಅದಕ್ಕೆ ಸಿಎಂ ಬ್ರೇಕ್ ಹಾಕಿದ್ದಾರೆ..ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ಬಸವರಾಜ ರಾಯರೆಡ್ಡಿ ಹಾಗೂ ಸಲಹೆಗಾರರನ್ನಾಗಿ ಬಿ.ಆರ್.ಪಾಟೀಲರನ್ನ ನೇಮಿಸಿದ್ದಾರೆ..ಇನ್ನು ಒಳಗೊಳಗೇ ಕೋಪಗೊಂಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನೂ ತಣ್ಣಗೆ ಮಾಡೋಕೆ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ..
ಈ ಮೂಲಕ ಮೂವರನ್ನೂ ಮತ್ತೆ ಸಿಡಿದು ನಿಲ್ಲದಂತೆ ತಡೆದಿದ್ದಾರೆ..ಅಲ್ಲಿಗೆ ಬಿಜೆಪಿ ಬಾಯಿಗೆ ಇನ್ನೇನು ಸಿಕ್ಕಿಬಿದ್ರು ಅನ್ನುವಾಗಲೇ ಬ್ರೇಕ್ ಹಾಕಿದ್ದಾರೆ..ಸರ್ಕಾರವನ್ನ ಸೇಫ್ ಮಾಡಿಕೊಳ್ಳುವಲ್ಲಿ ಸ್ವಲ್ಪ ಸಕ್ಸಸ್ ಆಗಿದ್ದಾರೆ.. ಒಟ್ನಲ್ಲಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಇನ್ನೇನು ಬಿಜೆಪಿ ಕಡೆ ಕಾಲಿಟ್ರು ಅನ್ನೋವಾಗಲೇ ಸಿಎಂ ಎಚ್ಚೆತ್ತುಕೊಂಡಿದ್ದಾರೆ..ಅಸಮಾಧಾನಿತರಿಗೆ ಪ್ರಮುಖ ಹೊಸ ಹುದ್ದೆಗಳನ್ನ ಕ್ರಿಯೇಟ್ ಮಾಡುವ ಮೂಲಕ ಸಂಕಷ್ಟದಿಂದ ಪಾರಾಗಿದ್ದಾರೆ..