ನೀವು ಯಾವಾಗಲಾದರೂ ಒತ್ತಡ ಅಥವಾ ಆತಂಕವನ್ನು ಅನುಭವಿಸಿದಾಗ ನಿಮ್ಮ ಅಂಗೈಗಳನ್ನು ಒಟ್ಟಿಗೆ ಉಜ್ಜಲು ಪ್ರಯತ್ನಿಸಿ. ಅಲ್ಲದೇ ಅಂಗೈ ಉಜ್ಜುವಿಕೆಯಿಂದ ಸಿಗುವ ಪ್ರಮುಖ ಪ್ರಯೋಜನಗಳ ಬಗ್ಗೆ ತಜ್ಞರು ವಿವರಿಸಿದ್ದಾರೆ.
1. ಒತ್ತಡ ಕಡಿಮೆಯಾಗುತ್ತದೆ: ಅಂಗೈಗಳನ್ನು ಒಟ್ಟಿಗೆ ಉಜ್ಜಿದಾಗ, ನಮ್ಮ ಕೈಯಲ್ಲಿ ರಕ್ತ ಮತ್ತು ಶಕ್ತಿಯ ಪರಿಚಲನೆಯು ಹೆಚ್ಚಾಗುತ್ತದೆ. ಅದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ನೀವು ಆಯಾಸಗೊಂಡಾಗ ನಿಮ್ಮ ಏಕಾಗ್ರತೆಯನ್ನು ಮರಳಿ ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ಚುರುಕುಗೊಳಿಸಲು ಇದು ಸಹಕಾರಿಯಾಗಿದೆ.
2. ಆತಂಕದ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ: ಹೆಚ್ಚಿದ ಒತ್ತಡದ ಲಕ್ಷಣಗಳು ನಮ್ಮ ಮನಸ್ಸಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಆದರೆ ದೈಹಿಕವಾಗಿಯೂ ಸಹ ಕಾಣಿಸಿಕೊಳ್ಳಬಹುದು
ಅಂಗೈ ಉಜ್ಜುವಿಕೆಯಿಂದ ಉಂಟಾಗುವ ಉಷ್ಣತೆಯು ನಮ್ಮ ನರಮಂಡಲವನ್ನು ಶಮನಗೊಳಿಸುತ್ತದೆ. ನಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ದೈಹಿಕ ಒತ್ತಡದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಭಾವನಾತ್ಮಕ ಸಮತೋಲನ: ಈ ಅಭ್ಯಾಸದಿಂದ ಉತ್ಪತ್ತಿಯಾಗುವ ಉಷ್ಣತೆ ಮತ್ತು ಶಕ್ತಿಯು ಹೃದಯ ಚಕ್ರದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಇದು ನಮ್ಮ ಭಾವನಾತ್ಮಕ ಯೋಗಕ್ಷೇಮಕ್ಕೆ ನೇರವಾಗಿ ಸಂಬಂಧಿಸಿದೆ.
ನಮ್ಮ ದೇಹದ ಈ ಶಕ್ತಿ ಕೇಂದ್ರವನ್ನು ಸಕ್ರಿಯಗೊಳಿಸುವ ಮೂಲಕ, ಅಂಗೈ ಉಜ್ಜುವಿಕೆಯು ನಮ್ಮ ದೇಹದಿಂದ ಭಾವನಾತ್ಮಕ ಬ್ಲಾಕ್ಗಳನ್ನು ಬಿಡುಗಡೆ ಮಾಡಲು ಸಹಕಾರಿಯಾಗಿದೆ. ಆ ಮೂಲಕ ಆಂತರಿಕ ಶಾಂತಿಯ ಭಾವವನ್ನು ಉತ್ತೇಜಿಸುತ್ತದೆ.
4. ಕೈಗಳನ್ನು ಬೆಚ್ಚಗಾಗಿಸುತ್ತದೆ: ಕೆಲವರು ತಣ್ಣನೆಯ ಕೈಗಳಿಂದ ಅಥವಾ ತಮ್ಮ ಬೆರಳುಗಳಲ್ಲಿ ಬಿಗಿತದಿಂದ ಬಳಲುತ್ತಿರುತ್ತಾರೆ. ಮಳೆಗಾಲ ಅಥವಾ ಚಳಿಗಾಲದಲ್ಲಿ ಇಂಥ ಸಮಸ್ಯೆ ಹೆಚ್ಚಾಗುತ್ತದೆ.
ಅಂಥವರಿಗೆ ಅಂಗೈ ಉಜ್ಜುವ ಅಭ್ಯಾಸ ವರದಾನವಾಗಿದೆ. ಇದು ಅಂಥವರ ಕೈಯಲ್ಲಿ ರಕ್ತ ಪರಿಚಲನೆ ಹೆಚ್ಚಿಸಬಹುದು. ಹಾಗೆಯೇ ಅವರ ಕೈಯಲ್ಲಿ ಹೆಚ್ಚು ನಮ್ಯತೆಯನ್ನು ಉಂಟುಮಾಡಬಹುದು.
5. ಉತ್ತಮ ಗುಣಮಟ್ಟದ ನಿದ್ರೆ: ಅಂಗೈ ಉಜ್ಜುವುದು ನಿಮ್ಮ ನರಮಂಡಲವನ್ನು ಶಾಂತಗೊಳಿಸುವ ಪರಿಣಾಮವನ್ನು ನೀವು ಗಮನಿಸಬಹುದು. ಇದು ಮನಸ್ಸು ಮತ್ತು ದೇಹವನ್ನು ವಿಶ್ರಾಂತಿಗಾಗಿ ಸಿದ್ಧಪಡಿಸುತ್ತದೆ. ರಾತ್ರಿಯಲ್ಲಿ ನಿದ್ರೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದ್ದರೆ ನೀವು ಈ ತಂತ್ರವನ್ನು ಅಭ್ಯಾಸ ಮಾಡಬಹುದು
5. ಉತ್ತಮ ಗುಣಮಟ್ಟದ ನಿದ್ರೆ: ಅಂಗೈ ಉಜ್ಜುವುದು ನಿಮ್ಮ ನರಮಂಡಲವನ್ನು ಶಾಂತಗೊಳಿಸುವ ಪರಿಣಾಮವನ್ನು ನೀವು ಗಮನಿಸಬಹುದು. ಇದು ಮನಸ್ಸು ಮತ್ತು ದೇಹವನ್ನು ವಿಶ್ರಾಂತಿಗಾಗಿ ಸಿದ್ಧಪಡಿಸುತ್ತದೆ. ರಾತ್ರಿಯಲ್ಲಿ ನಿದ್ರೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದ್ದರೆ ನೀವು ಈ ತಂತ್ರವನ್ನು ಅಭ್ಯಾಸ ಮಾಡಬಹುದು.
ಶಾಖವನ್ನು ಉತ್ಪಾದಿಸಲು ನಿಮ್ಮ ಕೈಗಳನ್ನು ಬಲವಾಗಿ ಒಟ್ಟಿಗೆ ಉಜ್ಜಿ. ಅಂಗೈಗಳಲ್ಲಿ ಗಮನಾರ್ಹವಾದ ಉಷ್ಣತೆ ಉಂಟಾಗುವವರೆಗೂ ಮುಂದುವರಿಸಿ. ವಿಶ್ರಾಂತಿ ಪಡೆಯಲು ಬಯಸುವ ಯಾವುದೇ ಭಾಗಗಳ ಮೇಲೆ ಬೆಚ್ಚಗಾದ ಕೈಗಳನ್ನು ಇರಿಸಿ. ನೀವು ಪ್ರತಿದಿನ ಬೆಳಿಗ್ಗೆ ಅಂಗೈ ಉಜ್ಜುವಿಕೆಯನ್ನು ಅಭ್ಯಾಸ ಮಾಡಬಹುದು