ಆನೇಕಲ್ ;ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದ ಎಎಪಿ ಅಭ್ಯರ್ಥಿ ಕೊಳಚೆ ನೀರನ್ನ ಕುಡಿಬೇಡಿ, ಶುದ್ಧ ನೀರನ್ನು ಕುಡಿಯಿರಿ ಹೀಗಾಗಿ ನನಗೊಂದು ಅವಕಾಶ ಮಾಡಿಕೊಡಿ. ಎಂದು ಆನೇಕಲ್ ಅಭ್ಯರ್ಥಿ ಎಂ ಮುನೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.. ಹೌದು ಆನೇಕಲ್ ತಾಲ್ಲೂಕಿನ ಕೀರ್ತನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು.. ಈ ಬಾರಿ ಎಎಪಿಗೆ ದಲಿತಪರ ಸಂಘಟನೆಗಳು ಬೆಂಬಲ ಸೂಚಿಸುತ್ತಿದೆ.
Video Player
00:00
01:03
ಎಎಪಿ ಬಡವರ ಪಕ್ಷ ಜನಸಾಮಾನ್ಯರ ಪಕ್ಷ ರಾಜಸ್ಥಾನ ಮತ್ತು ಡೆಲ್ಲಿಯಲ್ಲಿ ಅಧಿಕಾರವನ್ನು ಪಡೆದುಕೊಂಡು ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ ಹಾಗಾಗಿ ಆ ಪಕ್ಷದಿಂದ ಆನೇಕಲ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ.. ರಾಜಕೀಯ ಪಕ್ಷಗಳು ತಲತಲಾಂತರ ತಿನ್ನುವಷ್ಟು ಆಸ್ತಿಗಳನ್ನು ಮಾಡಿ ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದೆ.. ಹೀಗಾಗಿ ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ ಅಂತ ಅಭ್ಯರ್ಥಿ ಮುನೇಶ್ ಮತದಾರರ ಬಳಿ ಮನವಿಯನ್ನ ಮಾಡ್ಕೊಂಡ್ರು.