ಹುಬ್ಬಳ್ಳಿ: ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ಜಾರಿಯಿಂದ ಅಟೋ ಚಾಲಕರು ಸಂಕಷ್ಟಕ್ಕೆ ಗುರಿಯಾಗಿದ್ದು ವಿವಿಧೆ ಬೇಡಿಕೆ ಈಡೇರಿಸಲು ಆಗ್ರಹಿಸಿ ಇಂದು ನಗರದಲ್ಲಿ ಅಟೋ ಚಾಲಕರು ಪ್ರತಿಭಟನೆ ಮಾಡಿದರು.
ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ ಆದೇಶ ಹೊರಡಿಸಿತ್ತು.
ಇದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ, ಅನ್ನ ಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಇರುವ ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ 10 ಕೆ. ಜಿ. ಉಚಿತ ಅಕ್ಕಿ ವಿತರಣೆ, ಗೃಹ ಜ್ಯೋತಿ ಯೋಜನೆ ಅಡಿ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡಿರುವ ಸಿಎಂ ಸಿದ್ದರಾಮಯ್ಯ ಸಾರಥ್ಯದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಉಳಿದವರ ಬಗ್ಗೆ ಚಿಂತನೆ ಮಾಡಲೇ ಇಲ್ಲ. ಚುನಾವಣಾ ಸಂದರ್ಭದಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಲು ಭರವಸೆಗಳ ಮೇಲೆ ಭರವಸೆ ನೀಡಿತು.
ಆದರೆ ಆ ಭರವಸೆ ಮತಕ್ಕೆ ನೀಡಿದ ಘೋಷಣೆಯಿಂದ ಎಲ್ಲ ವರ್ಗಕ್ಕೂ ಅನುಕೂಲ ಆಯಿತಾ ಎಂಬ ಕುರಿತು ಸರ್ಕಾರ ಯಾವುದೇ ರೀತಿಯ ಚಿಂತನೆ ಮಾಡಲೇ ಇಲ್ಲ. ಈಗ ಸಾರಿಗೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆ ಜಾರಿ ನಂತರ ಅಟೋ ಚಾಲಕರು ಬೀದಿಗಳಿದ್ದಾರೆ. ನಗರದ ೧೦ ಕೀಲೋ ಮೀಟರ್ ವ್ಯಾಪ್ತಿಯಲ್ಲಿ ಬಸ್ ನಲ್ಲಿ ಉಚಿತ ಯೋಜನೆ ರದ್ದು ಮಾಡಬೇಕು, ಅಟೋ ಚಾಲಕರಿಗೆ ಎಲ್ಲ ಸೌಲಭ್ಯ ನೀಡಬೇಕು ಹಾಗೂ ತಿಂಗಳಿಗೆ ವೇತನ ಸೇರಿದಂತೆ ಅನೇಕ ಬೇಡಿಕೆಗೆ ಆಗಚರಡ ಮಾಡಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು.
ಇನ್ನು ಶಕ್ತಿ ಯೋಜನೆಯಿಂದ ಸಾಕಷ್ಟು ತೊಂದರೆ ಅಟೋ ಚಾಲಕರಿಗೆ ಆಗುತಿದ್ದು, ಅಟೋ ಹಾಗೂ ಕ್ಯಾಬ್ ಚಾಲಕರ ಹಾಗೂ ಅವರನ್ನೇ ನಂಬಿದವರ ಗತಿ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ೧೦ ಸಾವಿರ ಅಟೋ ಹೊಂದಿದ್ದ ಸಿಬ್ಬಂದಿ ಮೊದಲೇ ಪೆಟ್ರೋಲ್ ಹಾಗೂ ಡಿಸೇಲ್ ದುಬಾರಿಯಿಂದ ಹಾಗೂ ಪೊಲೀಸ್ ಬೇಕಾಬಿಟ್ಟಿ ಕಾನೂನುಗಳಿಂದ ಬೇಸತ್ತು ಹೋಗಿದ್ದು ತಮ್ಮ ಬದುಕಿಗೆ ಪರ್ಯಾಯ ವ್ಯವಸ್ಥೆ ಮಾಡಲಿ ಎಂದ ಅವರು ಒತ್ತಾಯ ಮಾಡಿದರು.