ಸಾಕಷ್ಟು ಮಂದಿಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಬೇಕು ಅನ್ನೋ ಆಸೆ ಇರುತ್ತೆ. ಆದರೆ ಕೆಲವರಿಗೆ ಮಾತ್ರ ಇದರ ಸಹವಾಸವೇ ಬೇಡ ಎನ್ನುತ್ತಾರೆ. ಯಾಕಂದ್ರೆ ಮನೆಯ ಹೊರಗೆ ಸಂಪಾದಿಸಿದ ಗೌರವ ಮನೆಯಲ್ಲಿ ಸಿಗಲ್ಲ ಅನ್ನೋದು ಹಲವರ ವಾದ. ಇದೀಗ ಬಿಗ್ ಬಾಸ್ ಮನೆಯಲ್ಲಿ ತಮಗೆ ಅಸಭ್ಯವಾಗಿ ಬೈದರು, ಮನೆಯಲ್ಲಿ ಗೌರವ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಹೊರ ಹೋಗಲು ಗೋಲ್ಡ್ ಸುರೇಶ್ ನಿರ್ಧಾರ ಮಾಡಿದ್ದಾರೆ.
50 ದಿನ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟಿರುವ ರಜತ್ ಮನೆಗೆ ಬರ್ತಿದ್ದಂಗೆ ಕಿರಿಕ್ ಮಾಡ್ಕೊಂಡಿದ್ದಾರೆ. ಗೋಲ್ಡ್ ಸುರೇಶ್ ಗೆ ‘ವೇಸ್ಟ್ ನನ್ ಮಗ’ ಎಂದು ಬೈಯ್ದಿದ್ದಾರೆ. ಜೊತೆಗೆ ಕೆಲವು ಅವಾಚ್ಯ ಪದಗಳಿಂದಲೂ ನಿಂದಿಸಿದ್ದಾರೆ.
ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಕಿರಿಕ್ ಆಯಿತು. ಇಬ್ಬರೂ ಪರಸ್ಪರ ಬೈಯ್ದುಕೊಂಡರು. ಆದರೆ ರಜತ್ ಅವರ ಮಿತಿ ಮೀರಿ, ಅವಾಚ್ಯ ಪದಗಳನ್ನು ಬಳಸಿದರು. ಇದರಿಂದ ಕೋಪಗೊಂಡ ಸುರೇಶ್ಕ್ಯಾಮೆರಾ ಎದುರು ಬಂದು ಬಿಗ್ ಬಾಸ್ಗೆ ದೂರು ನೀಡಿದರು. ‘ಇಂಥ ಅಶ್ಲೀಲ ಮಾತುಗಳನ್ನು ಹೇಳಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಹೊರಗೆ ಹೋಗುತ್ತೇನೆ’ ಎಂದು ಸುರೇಶ್ ಹಠ ಮಾಡಿದರು.
ಗೋಲ್ಡ್ ಸುರೇಶ್ ಅವರು ಅರ್ಧಕ್ಕೆ ಟಾಸ್ಕ್ ನಿಲ್ಲಿಸಿದರು. ‘ನಾನು ಆಡುವುದಿಲ್ಲ’ ಎಂದು ಖಡಕ್ ಆಗಿ ನಿರ್ಧಾರ ತೆಗೆದುಕೊಂಡರು. ಅಲ್ಲದೇ, ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದರು. ಕೆಟ್ಟ ಪದಗಳಿಂದ ಬೈಯ್ಯಿಸಿಕೊಂಡು ನೋವಾಗಿದ್ದರಿಂದ ಸುರೇಶ್ ಅವರು ಕಣ್ಣೀರು ಹಾಕಿದರು.
52 ದಿನಗಳ ಕಾಲ ಕಷ್ಟಪಟ್ಟು ಆಡಿದ ಗೋಲ್ಡ್ ಸುರೇಶ್ ಅವರು ಈಗ ಅರ್ಧಕ್ಕೆ ಹೊರಟು ಹೋಗುತ್ತಾರೆ ಎಂದರೆ ಇಷ್ಟು ದಿನಗಳ ಶ್ರಮ ವ್ಯರ್ಥ ಆದಂತೆ ಆಗುತ್ತದೆ. ಹಾಗಾಗಿ ಇನ್ನುಳಿದ ಸದಸ್ಯರು ಸುರೇಶ್ಗೆ ಬುದ್ಧಿ ಹೇಳಲು ಪ್ರಯತ್ನಿಸಿದರು. ರಜತ್ಗೆ ಆಟದ ಮೂಲಕವೇ ಉತ್ತರ ನೀಡಿ, ಮತ್ತೆ ಉತ್ತಮ ಎನಿಸಿಕೊಳ್ಳಿ ಎಂದು ತ್ರಿವಿಕ್ರಮ್ ಹೇಳಿದರು. ಎಲ್ಲರೂ ಸಮಾಧಾನ ಮಾಡಿದ್ದರಿಂದ ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.