ಇತ್ತೀಚಿಗೆ ಅಂತೂ ಸರ್ಕಾರಿ ಬಸ್ ಗಳು ಸಿಕ್ಕಪಟ್ಟೆ ಕೆಟ್ಟು ನಿಲ್ಲುತ್ತಾ ಇದೆ..ಹೀಗಾಗಿ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಆಗ್ತಿದೆ.ಇದರಿಂದ ನಿಗಮಕ್ಕೂ ಕೂಡ ಕೆಟ್ಟ ಹೆಸರು ಬರುತ್ತಿದೆ ಆದ್ರೆ ಇದೀಗ.ಇದನ್ನು ನಿಲ್ಲಿಸೋದಕ್ಕೆ ಶೀಘ್ರದಲ್ಲೇ ಸಾವಿರಕ್ಕೂ ಹೆಚ್ಚು ಪ್ರೀಮಿಯಂ ಆಧಾರಿತ ಬಸ್ ಗಳನ್ನ ಖರೀದಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಸಾರಿಗೆ ನಿಗಮಗಳು ಜನ್ರ ನಾಡಿಮಿಡಿತ. ವರ್ಷಕ್ಕೆರೆಡು ರಾಷ್ಟ್ರಮಟ್ಟದ ಪ್ರಶಸ್ತಿ ,ಬೆಸ್ಟ್ ಸಾರ್ವಜನಿಕ ಸಾರಿಗೆ ಅನ್ನೋ ಗರಿ ಇದೆ.ಹೀಗಿದ್ದು ಇತ್ತೀಚಿಗೆ ಕೆಟ್ಟ ದಿನಗಳನ್ನು ಎದುರಿಸುತ್ತಾ ಇದೆ.
ಬಸ್ ಗಳು ಫಿಟ್ ಇಲ್ಲ. ಆಕ್ಸಿಡೆಂಟ್ ಗಳು ಜಾಸ್ತಿ ಆಗ್ತಿತ್ತಿವೆ..ಸದ್ಯ ನಿಗಮದ ಹಲವು ಬಸ್ ಗಳು 9 ಲಕ್ಷ ದಾಟಿದ ಬಸ್ ಗಳೇ ಆಗಿವೆ.ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದ ನಿಗಮ ಇದೀಗ ಹೊಸ ಬಸ್ ಖರೀದಿನತ್ತ ಮುಖ ಮಾಡಿದೆ.ಈಗಾಗಲೇ ಎಲೆಕ್ಟ್ರಿಕ್ ಬಸ್ ಗಳನ್ನ ಖರೀದಿ ಮಾಡ್ತಾ ಇರೋ ನಿಗಮ, ಇದೀಗ ಶಕ್ತಿ ಯೋಜನೆಯಿಂದ ಬಸ್ ಗಳ ಬೇಡಿಕೆ ಬಂದ ಬೆನ್ನಲ್ಲೇ ಹೊಸ ಬಸ್ ಖರೀದಿ, ಸಿಬ್ಬಂದಿ ನೇಮಕ ಜತೆ ಆದಾಯ ಹೆಚ್ಚಳ ಕಾರ್ಯಕ್ರಮ ರೂಪಿಸಿದೆ.
ಹೌದು.ನಾಲ್ಕು ಸಾರಿಗೆ ನಿಗಮಗಳಿಗೆ ಅಗತ್ಯ ಇರೋ 1000 ಬಸ್ ಗಳು ಸಮರ್ಪಣೆಯಾಗ್ತಿವೆ.ಸಾಮಾನ್ಯವಾಗಿ ಬಸ್ ಗಳು 9 ಲಕ್ಷ ಕಿಲೋ ಮೀಟರ್ ಕ್ರಮಿಸುತ್ತಿದ್ದಂತೆ ಗುಜರಿಗೆ ಹಾಕಲಾಗ್ತಿದೆ.ಆದ್ರೆ ಕೊರೊನಾ ಕಾರಣದಿಂದ ಹೊಸ ಬಸ್ ಖರೀದಿ ಆಗದೆ ಹಳೇ ಬಸ್ ಗಳನ್ನೇ ರಸ್ತೆಗಿಳಿಸುತ್ತಿರೋ ಕಾರಣದಿಂದ ನಿತ್ಯವೂ ತುಂಬಾ ತೊಂದ್ರೆ ಆಗ್ತುತ್ತಿತ್ತು.ತುರ್ತಾಗಿ ಹೋಗುವಾಗ ಅರ್ಧ ದಾರಿಯಲ್ಕೇ ಬಸ್ ಗಳು ಕೈ ಕೊಟ್ಟು ನಿಲ್ಲತ್ತಿರೋದ್ರಿಂದ ಪ್ರಯಾಣಿಕರು ಕಿರಿಕಿರಿ ಎದುರಿಸೋ ಸ್ಥಿತಿ ಎದುರಾಗ್ತಿತ್ತು.ಆದ್ರೆ ಇದೀಗ ಹಳೇ ಬಸ್ ಗಳಿಗೆ ಗುಡ್ ಬೈ ಹೇಳೋಕೆ ನಿಗಮಗಳು ರೆಡಿಯಾಗಿದೆ.
ನಿತ್ಯವೂ ಹಳೇಯ ಬಸ್ ಗಳ ರಿಪೇರಿಯಲ್ಲೇ ಕಾಲಹರಣ ಆಗುತ್ತಿರೋದನ್ನ ಗಮನಿಸಿ, ಇದೀಗ ಹಳೆ ಬಸ್ ಗಳನ್ನ ಗುಜರಿಗೆ ಹಾಕಿ ಹೊಸ ಬಸ್ ಗಳನ್ನ ರಸ್ತೆಗಿಸಲು ಮುಂದಾಗಿದೆ.ಹೊಸ ಮಾದರಿ bs 6 ಮಾದರಿಯ 1000 ಕ್ಕೂ ಹೆಚ್ಚು ಬಸ್ ಗಳು ನಿಗಮಕ್ಕೆ ಹಂತ ಹಂತವಾಗಿ ಸೇರ್ಪಡೆ ಆಗ್ತಿದ್ದು,ಈ ವರ್ಷದೊಳಗೆ ಎಲ್ಲಾ ಡೀಸೆಲ್ ಆಧಾರಿತ ಬಸ್ ಗಳು ಸೇರ್ಪಡೆ ಆಗಲಿವೆ.
ಒಟ್ಟಿನಲ್ಲಿ ಸದ್ಯ ಮುದಿ ಬಸ್ ಗಳನ್ನ ರಸ್ತೆಗಿಳಿಯುತ್ತಿರೋದರಿಂದ ಪ್ರಯಾಣಿಕರಲ್ಲಿ ಎದೆಬಿಡಿತ ಹೆಚ್ಚಿಸಿತ್ತು.ಆದ್ರೆ ಇದೀಗ ಸೇಫ್ಟಿ ಗೆ ಒತ್ತು ಕೊಟ್ಟು ಹೊಸ ಬಸ್ ಗಳನ್ನ ರಸ್ತೆಗಿಳಿಸೋಕ್ಕೆ ಮುಂದಾಗ್ತಿದೆ .ಇದರಿಂದ ಪ್ರಯಾಣಿಕರು ಸೇಫ್ ಅನ್ನೋ ನಂಬಿಕೆ ಇಟ್ಟು ಆರಾಮವಾಗಿ ಬಿಎಂಟಿಸಿ ಬಸ್ನಲ್ಲಿ ಸಂಚಾರ ಮಾಡಬಹುದು.ಶಕ್ತಿ ಯೋಜನೆ ಜಾರಿ ಬಳಿಕ ಮಹಿಳಾ ಪ್ರಯಾಣಿಕರಿಗೆ ಸಹ ಬೇಡಿಕೆ ತಕ್ಕಂತೆ ಬಸ್ ಸಿಗ್ತಿಲ್ಲ. ಹೀಗಾಗಿ ಹೊಸ ಬಸ್ ಶೀಘ್ರದಲ್ಲೇ ಎಂಟ್ರಿ ಕೊಟ್ಟರೆ ಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿ ಸಿಗೋ ಸಾಧ್ಯತೆ ಹೆಚ್ಚಿದೆ.