ಒಂದೆಲಗ , ಬ್ರಾಹ್ಮಿ, ತಿಮರೆ ಹೀಗೆ ಹಲವಾರು ಹೆಸರು ಕರೆಯಲ್ಪಡುವ ಈ ಒಂದೆಲಗ ಸೊಪ್ಪು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಅಂದ್ರೆ ತಪ್ಪಾಗಲಾರದು.
ಇದು ಹೆಚ್ಚು ಏಕಾಗ್ರತೆ, ನೆನಪಿನ ಶಕ್ತಿಯ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಇದರಿಂದ ವಿವಿಧ ತಿನಿಸುಗಳನ್ನು ಮಾಡಿ ಮಕ್ಕಳಿಗೆ ಕೊಡುತ್ತಾರೆ. ಇದೀಗ ಒಂದೆಲಗ ಚಟ್ನಿ ಮಾಡುವುದು ಹೇಗೆ ನೋಡಿ:
ಬೇಕಾಗುವ ಸಾಮಾಗ್ರಿಗಳು:
ಒಂದೆಲಗ ಸೊಪ್ಪು
ಕೊತ್ತಂಬರಿ ಸೊಪ್ಪು
ಕಾಯಿ ಮೆಣಸು
ತೆಂಗಿನಕಾಯಿ ತುರಿ,
ಆರ್ಧ ಹೆಚ್ಚಿದ ಈರುಳ್ಳಿ
3-4 ಬೆಳ್ಳುಳ್ಳಿ
ಸ್ವಲ್ಪ ಶುಂಠಿ
ಸ್ವಲ್ಪ ಹುಣಸೆ ಹುಳಿ
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವುದು ಹೇಗೆ:
ಮೊದಲು ಒಂದೆಲಗ ಸೊಪ್ಪನ್ನು ಚೆನ್ನಾಗಿ ತೊಳದುಕೊಳ್ಳಬೇಕು. ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನೂ ತೊಳೆದು ಇಡಬೇಕು. ನಂತರ ಅದಕ್ಕೆ ಅರ್ಧದಷ್ಟು ತೆಂಗಿನಕಾಯಿ ತುರಿದು ಪಕ್ಕದಲ್ಲಿಟ್ಟುಕೊಳ್ಳಬೇಕು. ನಂತರ ಮಿಕ್ಸ್ ನಲ್ಲಿ ಬಂದೆಲಗ ಸೊಪ್ಪು , ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ಆರ್ಧ ಹೆಚ್ಚಿದ ಈರುಳ್ಳಿ. ಸ್ವಲ್ಪ ಶುಂಠಿ, ಸ್ವಲ್ಪ ಹುಣಸೆ ಹುಳಿ
ಕಾಯಿ ಮೆಣಸು,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಅದಕ್ಕೆ ಸ್ವಲ್ಪ ಹದಕ್ಕೆ ನೀರು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಒಂದೆಲಗ ಚಟ್ನಿ ಇಡ್ಲಿ, ದೋಸೆ, ಚಪಾತಿ ಜೊತೆ ತಿನ್ನಲು ರೆಡಿ.