ಗುಡ್ ಫ್ರೈಡೇ ಎಂಬುದು ಯೇಸುಕ್ರಿಸ್ತನ ಶಿಲುಬೆಗೇರಿಸಿದ ದಿನ, ಅವನ ಮರಣ ಮತ್ತು ಅವನ ಸಮಾಧಿಯನ್ನು ಸ್ಮರಿಸಲು ಪ್ರಪಂಚದಾದ್ಯಂತದ ಕ್ರಿಶ್ಚಿಯನ್ ಸಮುದಾಯ ಆಚರಿಸುವ ದಿನವಾಗಿದೆ. ಈಸ್ಟರ್ ಭಾನುವಾರದ ಹಿಂದಿನ ಶುಕ್ರವಾರದಂದು ಇದನ್ನು ಆಚರಿಸಲಾಗುತ್ತದೆ ಮತ್ತು ಪವಿತ್ರ ವಾರದ ಅಂತ್ಯವನ್ನು ಸೂಚಿಸುತ್ತದೆ., ಪವಿತ್ರ ಶುಕ್ರವಾರದಂತಹ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಗುಡ್ ಫ್ರೈಡೇ ಮತ್ತು ಈಸ್ಟರ್ ಶುಕ್ರವಾರವನ್ನು ಮಾರ್ಚ್ 24ರಂದು ಆಚರಿಸಲಾಗುತ್ತದೆ, ಏಕೆಂದರೆ ಈಸ್ಟರ್ ಭಾನುವಾರ, ಮಾರ್ಚ್ 31 ರಂದು ಆಚರಿಸಲಾಗುತ್ತದೆ.
ಗುಡ್ ಫ್ರೈಡೇ ಕ್ರೈಸ್ತ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಗುಡ್ ಫ್ರೈಡೇಯನ್ನು ಆಚರಿಸುವ ಮುನ್ನ ಪಾಮ್ ಸಂಡೇ ಎನ್ನುವ ಹಬ್ಬವನ್ನು ಆಚರಿಸುತ್ತಾರೆ.
ಈ ಪಾಮ್ ಸಂಡೆಯನ್ನು 2024 ರಲ್ಲಿ ಮಾರ್ಚ್ 24 ರಂದು ಆಚರಿಸಲಾಗಿದ್ದು, ಈ ದಿನ ಯೇಸು ಕ್ರಿಸ್ತನು ಜೆರುಸೆಲೆಮ್ನ್ನು ಪ್ರವೇಶಿಸಿದರು ಎನ್ನಲಾಗುತ್ತದೆ.
ಗುಡ್ ಫ್ರೈಡೇ ನಂತರ 2024 ರ ಮಾರ್ಚ್ 31 ರಂದು ಭಾನುವಾರ ಈಸ್ಟರ್ನ್ನು ಆಚರಿಸಲಾಗುವುದು. ಹಾಗೇ 2024ರ ಗುಡ್ ಫ್ರೈಡೇಯನ್ನು ಮಾರ್ಚ್ 29 ರಂದು ಶುಕ್ರವಾರ ಆಚರಿಸಲಾಗುವುದು.
ಏಸುಕ್ರಿಸ್ತನನ್ನು ರೋಮನ್ ಅಧಿಕಾರಿಗಳು ಬಂಧಿಸಿ ಥಳಿಸುತ್ತಾರೆ. ನಂತರ ಕ್ಯಾಲ್ವರಿ ಪರ್ವತಗಳಲ್ಲಿ ಅವರನ್ನು ಶಿಲುಬೆಗೇರಿಸಲಾಗುತ್ತದೆ. ಈ ದಿನವನ್ನು ಗುಡ್ ಫ್ರೈಡೇ ಎಂದು ಕರೆಯುತ್ತಾರೆ ಎಂಬುದಕ್ಕೆ ಹಲವು ಸಿದ್ಧಾಂತಗಳಿವೆ.
ಇನ್ನು ಯರೂಶಲಂ ಅಥವಾ ಜೆರುಸಲೇಂನಲ್ಲಿ ಯೇಸು ಕ್ರಿಸ್ತನ ವಿರುದ್ಧ ಸಂಚು ರೂಪಿಸಿ ಮೋಸದಿಂದ ಶುಕ್ರವಾರದ ದಿನದಂದು ಶಿಲುಬೆಗೇರಿಸಲಾಯಿತು. ಈ ಶಿಲುಬೆಗೇರಿಸಿದ ಘಟನೆಯನ್ನು ಗುಡ್ ಫ್ರೈಡೇ ಎಂದು ಕರೆಯಲಾಗುತ್ತದೆ. ಈ ಘಟನೆಯನ್ನು ಕ್ರಿಶ್ಚಿಯನ್ ಧರ್ಮದ ಪ್ರಮುಖ ಧಾರ್ಮಿಕ ಗ್ರಂಥವಾದ ಬೈಬಲ್ನಲ್ಲಿ ವಿವರಿಸಲಾಗಿದೆ. ಗುಡ್ ಫ್ರೈಡೇಯು ಯೇಸುವಿನ ಮರಣದ ದಿನವಾಗಿದೆ. ಜಗತ್ತಿಗೆ ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ನೀಡಿದ ಜೀಸಸ್.
ನಂಬಿಕೆಯ ಪ್ರಕಾರ, ಅವರು ಪ್ರವಾದಿತ್ವವನ್ನು ಹೊಂದಿದ್ದರು, ಇದರಿಂದಾಗಿ ಯಹೂದಿಗಳಲ್ಲಿ ಯೇಸುವಿನ ಬಗ್ಗೆ ದ್ವೇಷ ಹುಟ್ಟಿಕೊಂಡಿತು. ಪ್ರವಾದಿತ್ವ ಎಂದರೆ ಒಬ್ಬರ ಪ್ರವಾದಿತ್ವದ ಬಗ್ಗೆ ಮಾತನಾಡುವುದು. ಯಹೂದಿಗಳ ಮೂಲಭೂತವಾದಿಗಳು ಯೇಸುಕ್ರಿಸ್ತನು ತನ್ನನ್ನು ದೇವರ ಮಗ ಎಂದು ಕರೆದುಕೊಳ್ಳುವುದನ್ನು ಅವರು ಇಷ್ಟಪಡಲಿಲ್ಲ.
ಅವರು ರೋಮನ್ನರಿಗೆ ಈ ಬಗ್ಗೆ ದೂರು ನೀಡಿದರು ಮತ್ತು ಶಿಲುಬೆಗೇರಿಸಿಬೇಕೆಂದು ಬೇಡಿಕೆಯನ್ನಿಟ್ಟರು. ಇನ್ನೊಂದು ನಂಬಿಕೆಯ ಪ್ರಕಾರ, ಚರ್ಚ್ನಲ್ಲಿ ರೋಮನ್ ತೆರಿಗೆದಾರರು ಅಸಭ್ಯ ವರ್ತನೆ ಮಾಡುತ್ತಿರುವುದನ್ನು ನೋಡಿರುತ್ತಾನೆ. ಇದರಿಂದ ದುಃಖಿತನಾದ ಯೇಸು ಅವರನ್ನು ಅಲ್ಲಿಂದ ಹೊಡೆದೋಡಿಸುತ್ತಾನೆ. ಪರಿಣಾಮವಾಗಿ, ರೋಮನ್ ಗವರ್ನರ್ ಯೇಸುವನ್ನು ಶಿಲುಬೆಗೇರಿಸುವ ಶಿಕ್ಷೆಯನ್ನು ವಿಧಿಸುತ್ತಾನೆ.
ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ಸ್ಥಳವನ್ನು ಗೊಲ್ಗೊಥಾ ಎಂದು ಕರೆಯಲಾಗುತ್ತದೆ. ಈ ಸ್ಥಳವು ಇಸ್ರೇಲ್ ರಾಜಧಾನಿ ಜೆರುಸಲೆಮ್ನ ಕ್ರಿಶ್ಚಿಯನ್ ಪ್ರದೇಶದಲ್ಲಿದೆ. ಈ ಸ್ಥಳವನ್ನೇ ಹಿಲ್ ಆಫ್ ದಿ ಕ್ಯಾಲ್ವರಿ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಫ್ಲ್ಯಾಗೆಲೇಷನ್ ಚರ್ಚ್ ಇದೆ.
ಇನ್ನು ಗುಡ್ ಫ್ರೈಡೇಯ ಮಹತ್ವ ಏನೆಂದರೆ, ದೇವರು ಅಂದರೆ ಏಸುಕ್ರಿಸ್ತ ಜಗತ್ತನ್ನು ಅತಿಯಾಗಿ ಪ್ರೀತಿಸುತ್ತಾನೆ ಎಂದು ನಂಬಲಾಗಿದೆ. ಅವನು ತನ್ನನ್ನು ನಂಬಿದ ಜನರ ಪಾಪ ವಿಮೋಚನೆಗಾಗಿ ಪ್ರಾಣವನ್ನು ತ್ಯಾಗ ಮಾಡಿದನು. ಆ ಕಾರಣಕ್ಕೆ ಈ ದಿನವನ್ನು ಶೋಕ ಮತ್ತು ದುಃಖದ ದಿನವನ್ನಾಗಿ ಆಚರಿಸಲಾಗುತ್ತದೆ