ಬೆಂಗಳೂರು: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಉದ್ಘಾಟಿಸಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 (T2) ನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಸಂಚಾರ ಆರಂಭವಾಗಿದೆ. ಹೌದು ಟರ್ಮಿನಲ್ 2 ನಿಂದ ಬಿಎಂಟಿಸಿಯ ವಾಯು ವಜ್ರ ಬಸ್ಗಳು ಕಾರ್ಯಾರಂಭ ಮಾಡಿವೆ. ಸುರಕ್ಷಿತ, ಆರಾಮದಾಯಕ ಮತ್ತು ಕೈಗೆಟುಕುವ ಪ್ರಯಾಣಕ್ಕಾಗಿ ಬಿಎಂಟಿಸಿ ಸೇವೆಗಳನ್ನು ಆರಿಸಿಕೊಳ್ಳಿ. ನಿಮ್ಮ ಮನೆ ಬಾಗಿಲಿಗೆ ನಮ್ಮ ಸೇವೆಯನ್ನು ತರುತ್ತಿದ್ದೇವೆ ಎಂದು ಬಿಎಂಟಿಸಿ ಭಾನುವಾರ ಟ್ವಿಟ್ ಮಾಡಿದೆ.
ಟರ್ಮಿನಲ್ 2ನಿಂದ ಜನವರಿ 15, 2023 ರಿಂದ ದೇಶಿ ವಿಮಾನಗಳು ಕಾರ್ಯಾಚರಣೆ ಪ್ರಾರಂಭವಾಯಿತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷದ ಸೆಪ್ಟೆಂಬರ್ನಲ್ಲಿ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಟರ್ಮಿನಲ್ 1ನಿಂದ ಟರ್ಮಿನಲ್ 2ಗೆ ಸ್ಥಳಾಂತರಿಸಲಾಗುವುದು. ಇನ್ನು ಟರ್ಮಿನಲ್ 1ನಿಂದ ದೇಶಿ ವಿಮಾನಗಳು ಕಾರ್ಯಾಚರಣೆ ಆರಂಭಿಸುತ್ತವೆ