ಕೇಬಲ್, ಡಿಶ್ ಟಿವಿ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮಾಸಿಕ ಬಿಲ್ ಅಗ್ಗವಾಗಲಿದೆ.
ಇದು ದೇಶಾದ್ಯಂತ ಇರುವ ಲಕ್ಷಾಂತರ ಡಿಟಿಎಚ್ ಮತ್ತು ಕೇಬಲ್ ಟಿವಿ ಬಳಕೆದಾರರಿಗೆ ದೊಡ್ಡ ಲಾಭ ನೀಡಲಿದೆ. ಪ್ರಮುಖವಾಗಿ ಸೆಟ್-ಟಾಪ್ ಬಾಕ್ಸ್ಗಳನ್ನು ಬದಲಾಯಿಸದೇ ಒಂದು ಸೇವಾದಾರರಿಂದ ಮತ್ತೊಂದು ಸೇವಾದಾರರಿಗೆ ಬದಲಾಯಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿದೆ.
ಹೀಗಾಗಿ ಸೆಟ್ಅಪ್ ಬಾಕ್ಸ್ಗೆ ಪದೇ ಪದೇ ಹಣ ಪಾವತಿಸುವ ಪ್ರಮೇಯ ಇರುವುದಿಲ್ಲ. ಜತೆಗೆ ಒಟ್ಟು ಬಿಲ್ ಕೂಡ ಅಗ್ಗವಾಗಲಿದೆ. ಅದಕ್ಕೆ ಪೂರಕವಾಗಿ ಮಾಸಿಕ ಟಿವಿ ಶುಲ್ಕಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಶಿಫಾರಸು ಕೂಡ ಮಾಡಿದೆ.
ಸೇವೆಗಳನ್ನು ಪೂರೈಕೆ ಮಾಡುವ ಕಂಪನಿಗಳು ಗ್ರಾಹಕರಿಗೆ ವಿಧಿಸುವ ನೆಟ್ವರ್ಕ್ ಸಾಮರ್ಥ್ಯ ಶುಲ್ಕವನ್ನು (ಎನ್ಸಿಎಫ್) ಟ್ರಾಯ್ ತೆಗೆದುಹಾಕಿದೆ. ಪ್ರಸ್ತುತ 200 ಚಾನೆಲ್ಗಳಿಗೆ 130 ರೂ ಮತ್ತು 200 ಕ್ಕೂ ಹೆಚ್ಚು ಚಾನೆಲ್ಗಳಿಗೆ 160 ರೂ. ವಿಧಿಸಲಾಗುತ್ತಿದೆ.
ನೆಟ್ವರ್ಕ್ ಸಾಮರ್ಥ್ಯ ಶುಲ್ಕ (ಎನ್ಸಿಎಫ್) ಮಿತಿ ತೆಗೆದುಹಾಕಿರುವ ಕಾರಣ ಸೇವಾ ಪೂರೈಕೆದಾರರು ಈಗ ವಿವಿಧ ಅಂಶಗಳ ಆಧಾರದ ಮೇಲೆ ವಿಭಿನ್ನ ಎನ್ಸಿಎಫ್ಗಳನ್ನು ಹೊಂದಿಸಬೇಕು. ಆದರೆ ಈ ಶುಲ್ಕಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು. ಅವರು ತಮ್ಮ ಆಯ್ಕೆಯನ್ನು ಪಡೆದುಕೊಳ್ಳಬಹುದು
ಡಿಪಿಒಗಳು ಈಗ ಚಾನೆಲ್ ಬಂಡಲ್ಗಳ ಮೇಲೆ 45% ವರೆಗೆ ರಿಯಾಯಿತಿಯನ್ನು ನೀಡಬಹುದು. ಹಿಂದಿನ ಮಿತಿ 15% ಮಾತ್ರ ಇತ್ತು. ಹೀಗಾಗಿ ಪಾವತಿಸುವ ಮೊತ್ತ ಕಡಿಮೆಯಾಗಲಿದೆ
ಸಾರ್ವಜನಿಕ ಸೇವಾ ಪ್ರಸಾರಕರ ಡಿಟಿಎಚ್ ವೇದಿಕೆಯಲ್ಲಿ ಪೇ ಚಾನೆಲ್ಗಳನ್ನು ಎಲ್ಲಾ ವಿತರಣಾ ಫ್ಲ್ಯಾಟ್ಫಾರ್ಮ್ಗಳಿಗೆ ಉಚಿತವಾಗಿ ಪ್ರಸಾರ ಮಾಡಬೇಕು. ಕ್ಯಾರೇಜ್ ಶುಲ್ಕದ ಉದ್ದೇಶಗಳಿಗಾಗಿ ಎಚ್ಡಿ ಮತ್ತು ಎಸ್ಡಿ
ಚಾನೆಲ್ಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಗಿದೆ. ಹೀಗಾಗಿ ದರ ವ್ಯತ್ಯಾಸ ಇರುವುದಿಲ್ಲ.
ಇನ್ಸ್ಟಾಲೇಷನ್ ಮತ್ತು ಮತ್ತು ಆಕ್ಟಿವೇಷನ್ ಸೇವೆಗಳಿಗೆ ಶುಲ್ಕಗಳು ಇನ್ನು ಮುಂದೆ ಪೂರೈಕೆದಾರರ ನಿರ್ಧಾರವಾಗಿದೆ. ಅದಕ್ಕೊಂದು ಮಿತಿಯಿಲ್ಲ. ಅಂದರೆ ಸೇವಾ ಪೂರೈಕೆದಾರರು ತಮ್ಮದೇ ಆದ ಶುಲ್ಕಗಳನ್ನು ನಿಗದಿಪಡಿಸಬಹುದು. ಆದರೆ ಅದನ್ನು ತಿಳಿಸಬೇಕು.
ಸ್ಪಷ್ಟತೆಗಾಗಿ ಪ್ರಿಪೇಯ್ಡ್ ಚಂದಾದಾರಿಕೆಗಳ ಅವಧಿಯನ್ನು ದಿನಗ ಲೆಕ್ಕದಲ್ಲಿ ಮೊದಲೇ ನಿರ್ದಿಷ್ಟಪಡಿಸಬೇಕು.
ಡಿಪಿಒಗಳು ಇಪಿಜಿಯಲ್ಲಿ ಎಂಆರ್ ಪಿಗಳ ಜೊತೆಗೆ ವಿತರಕ ಚಿಲ್ಲರೆ ಬೆಲೆಗಳನ್ನು (ಡಿಆರ್ ಪಿ) ತೋರಿಸಬೇಕು.
ಸುಂಕ ಆದೇಶ ಮತ್ತು ಇತರ ನಿಬಂಧನೆಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ.
ಸೇವಾ ಪೂರೈಕೆದಾರರು ತಮ್ಮ ವೆಬ್ಸೈಟ್ನಲ್ಲಿ ಎಲ್ಲಾ ಸುಂಕ ಮತ್ತು ಶುಲ್ಕ ಮಾಹಿತಿ ಪ್ರಕಟಿಸಬೇಕು ಮತ್ತು ಚಂದಾದಾರರಿಗೆ ತಮ್ಮ ಯೋಜನೆಗಳಿಗೆ ಸುಂಕಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಸಬೇಕು