ಬೆಂಗಳೂರು: ಬಾಕಿ ಬಿಲ್ ಪಾವತಿಗಾಗಿ ಪರದಾಡುತ್ತಿರುವ ಗುತ್ತಿಗೆದಾರರಿಗೆ ಅಡ್ವಾನ್ಸ್ ಹಣ ನೀಡಲು ಪಾಲಿಕೆ ಪ್ಲಾನ್ ಮಾಡಿದೆ. ಗುತ್ತಿಗೆದಾರರಿಗಾಗಿಯೇ 400 ಕೋಟಿ ಮೊತ್ತದ ವೆಂಡರ್ಬಿಲ್ ಡಿಸ್ಕೌಟಿಂಗ್ ಸಿಸ್ಟಮ್ ಯೋಜನೆ ಜಾರಿಯಾಗಿದ್ದು , ಇದಕ್ಕಾಗಿ ಹೆಚ್ಡಿಎಫ್ಸಿ ಬ್ಯಾಂಕ್ನೊಂದಿಗೆ ಒಪ್ಪಂದವೂ ಆಗಿದೆ. ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ಮುಂಗಡವಾಗಿ ಹಣ ಪಾವತಿ ಮಾಡಲು ಮುಂದಾಗಿದೆ. ಹೊಸದಾಗಿ ಕಾಮಗಾರಿ ಮಡುತ್ತಿರುವ ಗುತ್ತಿಗೆದಾರರಿಗೆ ಅಡ್ವಾನ್ಸ್ ಹಣ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಬಿಬಿಎಂಪಿಯ ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ಮುಂಗಡ ಹಣ ನೀಡುತ್ತೆ.
ಆದರೆ ಗುತ್ತಿಗೆದಾರರೇ ಅಡ್ವಾನ್ಸ್ ಆಗಿ ಪಡೆದ ಹಣಕ್ಕೆ ಬಡ್ಡಿ ಪಾವತಿಸಬೇಕಾಗುತ್ತದೆ. ವಾರ್ಷಿಕ ಶೇ.8.25ರಷ್ಟು ಬಡ್ಡಿ ದರದಲ್ಲಿ ಮುಂಗಡ ಹಣ ಪಾವತಿಸಬೇಕು. ಆದರೆ ಈ ಹಣವನ್ನ ಆರು ತಿಂಗಳ ಅವಧಿಯಲ್ಲಿ ಬಿಬಿಎಂಪಿ ಬ್ಯಾಂಕ್ಗೆ ಮರು ಪಾವತಿಸುತ್ತದೆ. ಈಗಾಗಲೇ ಈ ಯೋಜನೆಗೆ ಆಸಕ್ತ ಗುತ್ತಿಗೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಮುಂಗಡ ಹಣ ನೀಡಲಾಗುತ್ತೆ. ಈಗಾಗಲೇ ಸಾಕಷ್ಟು ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಹೇಳಿದ್ದಾರೆ.