ಬೆಂಗಳೂರಿಗೆ ಬಂತು ಡ್ರೈವರ್ ಲೆಸ್ ಮೆಟ್ರೋ ಬೋಗಿ ಮೂರು ಲಾರಿಗಳಲ್ಲಿ 6 ಚಾಲಕ ರಹಿತ ಮೆಟ್ರೋ ಬೋಗಿಗಳು ಇವತ್ತು ಬೆಳಗ್ಗೆ ಆಗಮನ
ಇಂದು ಮುಂಜಾನೆ 3.30ಕ್ಕೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದ ಚೀನಾದ ಕೋಚ್ ಗಳು ಹೆಬ್ಬಗೋಡಿ ಡಿಪೋಗೆ ಬಂದ 6 ಕಾರುಗಳ ಮೊದಲ ರೈಲು ಸೆಟ್
ಜನವರಿ 24ರಂದು ಚೀನಾದ ಬಂದರಿನಿಂದ ಹೊರಟಿದ್ದ 6 ಕಾರುಗಳ ಮೊದಲ ರೈಲು ಸಮುದ್ರ ಮಾರ್ಗವಾಗಿ ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿದ್ದವುಅಲ್ಲಿನ ಪ್ರಕ್ರಿಯೆ ಪೂರ್ಣಗೊಂಡು ಲಾರಿಗಳ ಮೂಲಕ ಅವುಗಳನ್ನು ಬೆಂಗಳೂರಿ ತರಲಾಗಿದೆ
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದೊರಗಿನ ಹಳದಿ ಮಾರ್ಗದಲ್ಲಿ ಈ ರೈಲಿನ ಓಡಾಟ ಚೀನಾದಿಂದ ಬರಬೇಕಿದ್ದ ಬೋಗಿಗಳ ವಿಳಂಬದಿಂದಾಗಿ ಹಳದಿ ಮಾರ್ಗದ ಲೋಕಾರ್ಪಣೆ ತಡವಾಗಿತ್ತು
ಈಗ ಎಲ್ಲಾ ವಿಘ್ನವೂ ಮುಗಿದಿದ್ದು ಈ ಮಾರ್ಗದಲ್ಲಿ ಮೆಟ್ರೋ ಸಂಚರಿಸುವ ದಿನ ಹತ್ತಿರ ಈಗ ಡ್ರೈವರ್ ಲೆಸ್ ಮೆಟ್ರೋ ಬೋಗಿ ಆಗಮನವಾಗಿದ್ದು ಟೆಸ್ಟಿಂಗ್ ಶೀಘ್ರದಲ್ಲಿ ಆರಂಭ ಅತ್ತ ಟಿಟಾಗರ್ ವ್ಯಾಗನ್ಸ್ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಸಿದ್ದಟಿಟಾಗರ್ ದ ಉತ್ಪಾದನ ಘಟಕದಲ್ಲಿ ಕೋಚ್ ತಯಾರು ಮಾಡ್ತಿರುವ ಚೀನಾಹಲವು ಹಂತದಲ್ಲಿ ಎರಡೂವರೆ ತಿಂಗಳು ಪ್ರಾಯೋಗಿಕ ಪರೀಕ್ಷೆ ನಡೆಯುತ್ತೆ ನಂತರ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರು ಬಂದು ಟೆಸ್ಟ್ ಮಾಡಿ ಅನುಮೋದನೆ ನೀಡ್ತಾರೆ
ಚೀನಾ-ಮಾಲೀಕತ್ವದ ಸಿಆರ್ಆರ್ಸಿ ನಾನ್ಜಿಂಗ್ ಪುಜೆನ್ ಕಂ. ಲಿಮಿಟೆಡ್ನಿಂದ ತಯಾರಿಸಲ್ಪಟ್ಟ ಮೆಟ್ರೋ ರೈಲು ಈ ಚಾಲಕ ರಹಿತ ಟ್ರೈನ್ ಆರ್ವಿ ರಸ್ತೆ-ಬೊಮ್ಮಸಂದ್ರ ಲೈನ್ನಲ್ಲಿ ಸಂಚಾರ ಮಾಡಲಿದೆ ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ