ಮಾರ್ಚ್ ನಲ್ಲಿ ಯಲ್ಲೋ ಲೈನ್ ನಲ್ಲಿ ವಾಣಿಜ್ಯ ಸಂಚಾರಕ್ಕೆ BMRCL ಸಿದ್ದತೆ ನಡೆಸಿದ್ದು, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗ ಸಿದ್ಧವಾಗಿದೆ. 18.82 ಕಿ.ಮೀ ಉದ್ದದ 16 ಎಲಿವೇಟೆಡ್ ನಿಲ್ದಾಣಗಳೊಂದಿಗೆ ಹಳದಿ ಮಾರ್ಗ ಸಿದ್ಧವಾಗಿದ್ದು, ಎಲ್ಲಾ ಪರೀಕ್ಷೆಗಳನ್ನ ಮುಗಿಸಿ ರೈಲಿಗಾಗಿ BMRCL ಕಾಯಿತ್ತಿದೆ. ಜನವರಿ15ಕ್ಕೆ ಬೆಂಗಳೂರಿಗೆ ಲೋಕೋ ಪೈಲೆಟ್ ಲೆಸ್ ರೈಲು ಬರಲಿದ್ದು, ಚೀನಾದಿಂದ ಸಮುದ್ರ ಮಾರ್ಗವಾಗಿ ಚೈನೈಗೆ ಪ್ರಯಾಣ ಮಾಡಲಾಗುತ್ತದೆ.
ಬಳಿಕ ರಸ್ತೆ ಮಾರ್ಗವಾಗಿ ಮೂಲ ಮಾದರಿ ರೈಲು ಬೊಮ್ಮಸಂದ್ರ ಪ್ರವೇಶ ಮಾಡಲಿದೆ. ಈ ಬೆನ್ನಲ್ಲೇ ಮೂರನೇ ರೈಲು ಸಹ ರೀಚ್ ಸಾಧ್ಯತೆ ಇದೆ. ಅಂದುಕೊಂಡಂತೆ ಆದ್ರೆ ಎಲ್ಲೋ ಲೈನ್ ಮೆಟ್ರೋ ವಾಣಿಜ್ಯ ಸಂಚಾರ ಫಿಕ್ಸ್ ಎನ್ನಲಾಗಿದೆ.