ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ 6 ಕಂತನ್ನು ಪಡೆದಿರುವ ರಾಜ್ಯದ ಬಹುತೇಕ ಮನೆ ಯಜಮಾನಿಯರು 7ನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳನ್ನು ಹಿಡಿದು ಹಣ ಕ್ರೆಡಿಟ್(Money credit) ಆಗುವ ಮೆಸೇಜ್ ಗಾಗಿ ಕಾಯುತ್ತಿದ್ದಾರೆ.
ಇನ್ನು ಕೆಲವರು, ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಕೆವೈಸಿ ಆಗದಿರುವ ಕಾರಣಗಳಿಂದಾಗಿ ಗೃಹಲಕ್ಷ್ಮೀಯ 5/6 ಕಂತಿನ ಹಣದಿಂದಲೇ ವಂಚಿತರಾಗಿದ್ದಾರೆ. ಎಲ್ಲರಿಗೂ ಸಿಗುತ್ತಿದ್ದು ನಮಗ್ಯಾಕೆ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಹಿಳಾ ಫಲಾನುಭವಿಗಳು,
ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಅರ್ಹರಿದ್ದೂ ಈವರೆಗೆ 6 ನೆಯ ಕಂತೂ ಸಹ ಸಿಗದೇ ಇದ್ದರೆ, ನೀವು ಕೊಟ್ಟಿರುವ ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಕೆವೈಸಿ(KYCಮಾಡಿಸಬೇಕು. ಅಂದರೆ, ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಅನ್ನು ಮಾಡಿಸಿಕೊಳ್ಳಿ ಆಗ ಹಣ ಜಮೆಯಾಗಲಿದೆ. ಉಳಿದಂತೆ ಜಮೆಯಾಗುತ್ತಿರುವವರಿಗೆ ಪ್ರತಿ ತಿಂಗಳು 13ನೇ ತಾರೀಖಿನಿಂದ 20ನೇ ತಾರೀಖಿನ ಒಳಗೆ ಗೃಹ ಲಕ್ಷ್ಮಿ ಹಣ ಜಮೆ ಆಗುತ್ತದೆ.
7 ನೆಯ ಕಂತಿನ ಹಣ ಬಿಡುಗಡೆ ಆಗೋದು ಯಾವಾಗ ?
ಈಗಾಗಲೇ 6 ಕಂತು ಹಣವನ್ನು ಪಡೆದಿರುವ ಮಹಿಳೆಯರು 7 ಕಂತಿನ ಹಣವನ್ನು ಮಾರ್ಚ್ ತಿಂಗಳಲ್ಲಿ ಪಡೆಯಲಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 2,000 ರೂಪಾಯಿಯನ್ನು ಪಡೆಯುತ್ತಾರೆ.
ಇಲ್ಲಿ ಅವರ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್ಗೆ SMS ಬರುತ್ತದೆ. ಹಲವು ಬಾರಿ SMS ಬರುವುದಿಲ್ಲ. ಇಂತಹ ಸಮಯದಲ್ಲಿ ಮನೆಯಲ್ಲೇ ಕುಳಿತು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಬಹುದು.