ಬೆಂಗಳೂರು: ನಮ್ಮ ಮೆಟ್ರೋದಾರರರಿಗೆ ಗುಡ್ ನ್ಯೂಸ್ ಸಿಗಲಿದ್ದು ಶೀಘ್ರದಲ್ಲಿಯೇ ಚಾಲಕ ರಹಿತ ಮೆಟ್ರೋ ಆರಂಭವಾಗಲಿದೆ.
ಚೀನಾದಿಂದ ಬಂದಿರುವ ಮೊದಲ ಚಾಲಕ ರಹಿತ ಮೆಟ್ರೋ ಆಗಿದ್ದು ಹೆಬ್ಬಗೋಡಿ ಡಿಪೋಗೆ ಫೆಬ್ರವರಿ 14 ರಂದು ಬಂದಿದ್ದ ಮೆಟ್ರೋ ಈಗಾಗಲೇ ಎಲ್ಲಾ ಬೋಗಿಗಳ ಜೋಡಣೆ ಯಶಸ್ವಿಯಾಗಿದ್ದು ಸ್ಪ್ಯಾಟಿಕ್ & ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಯ ನಡೆಯಲಿದೆ
ನಾಲ್ಕು ತಿಂಗಳವರೆಗೆ 37 ಮಾದರಿಯ ಪರೀಕ್ಷೆಗಳು ನಡೆಯಲಿವೆ ನಂತರ ಸಿಗ್ನಲಿಂಗ್ ವ್ಯವಸ್ಥೆ, ದೂರಸಂಪರ್ಕ ವ್ಯವಸ್ಥೆ ಮಾಡಲಾಗಿದ್ದು ಈಗಾಗಲೇ ವಿದ್ಯುತ್ ಸರಬರಾಜು ವ್ಯವಸ್ಥೆ ಟೆಸ್ಟಿಂಗ್ ಪ್ರಕ್ರಿಯೆ ಮುಗಿದೆ.
ಲೋಕೋ ಪೈಲೆಟ್ ಲೆಸ್ ಮೆಟ್ರೋ ದಾರಿ
ನಿರ್ಮಾಣ ಹಂತದಲ್ಲಿರುವ 18.82 ಕಿಮೀ ಮೆಟ್ರೋ ಮಾರ್ಗ
ಆರ್ ವಿ ರಸ್ತೆ – ಬೊಮ್ಮಸಂದ್ರದ ನಡುವೆ ಕನೆಕ್ಟ್
ಒಟ್ಟು 16 ನಿಲ್ದಾಣಗಳನ್ನ ಹೊಂದಿರುವ ಮೆಟ್ರೋ ಮಾರ್ಗ
ಆರ್ ವಿ ರಸ್ತೆ ನಿಲ್ದಾಣದಲ್ಲಿ ಮೆಟ್ರೋದ ಹಸಿರು ಮಾರ್ಗವಾಗಿ
ಜಯದೇವ ಆಸ್ಪತ್ರೆಯ ನಿಲ್ದಾದಲ್ಲಿ ಗುಲಾಬಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಿದೆ