ಅಯೋಧ್ಯೆ: ಶ್ರೀರಾಮಮಂದಿರ (Shri Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ದೇಶ-ವಿದೇಶಗಳಿಂದ ಭಕ್ತರು ಹಲವು ರೀತಿಯಲ್ಲಿ ಉಡುಗೊರೆಗಳನ್ನು ಅಯೋಧ್ಯೆಗೆ ತಲುಪಿಸುತ್ತಿದ್ದಾರೆ. ಆದ್ರೆ ಗುಜರಾತ್ನ (Gujarat) ನವಸಾರಿ ನಗರದ ಕಲಾವಿನೊಬ್ಬ ಸಾವಿರಾರು ರಾ
ಕಲಾವಿದ (Gujarat Tattooist) ಜಯ್ ಸೋನಿ ಗುಜರಾತ್ನಲ್ಲಿ ರಾಮನ ಭಕ್ತರಿಗೆ ಉಚಿತವಾಗಿ ಶ್ರೀರಾಮನ ಹೆಸರನ್ನು ಹಚ್ಚೆಹಾಕಲು ಮುಂದಾಗಿದ್ದಾನೆ. ಈಗಾಗಲೇ ಅಭಿಯಾನ ಶುರು ಮಾಡಿದ್ದು 200 ಭಕ್ತರ ಕೈಯಲ್ಲಿ ʻಶ್ರೀರಾಮʼನ ಹೆಸರನ್ನು ಹಚ್ಚೆಹಾಕಿದ್ದಾನೆ, ಇನ್ನೂ 700 ಮಂದಿಗೆ ಮುಂಗಡವಾಗಿ ಕಾಯ್ದಿರಿಸಿದ್ದಾನೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗುವ ವೇಳೆಗೆ ಕನಿಷ್ಠ 1,000 ಮಂದಿಗೆ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆ ಸಲ್ಲಿಸಲು ಮುಂದಾಗಿದ್ದಾನೆ.
ಮಭಕ್ತರಿಗೆ ಉಚಿತವಾಗಿ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾಗಿದ್ದಾನೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದಾಗ ನನ್ನ ಕಡೆಯಿಂದ ಏನು ಸೇವೆ ಮಾಡಬಹುದೆಂದು ನಾನು ಯೋಚಿಸುತ್ತಿದ್ದೆ. ಟ್ಯಾಟೂ ಕಲಾವಿದನಾಗಿರುವುದರಿಂದ, ಭಕ್ತರಿಗೆ ಭಗವಾನ್ ಶ್ರೀರಾಮನ ಹೆಸರನ್ನೇ ಉಚಿತವಾಗಿ ಹಚ್ಚೆ ಹಾಕಬೇಕೆಂದು ನಿರ್ಧರಿಸಿದೆ ಎಂಬುದಾಗಿ ಕಲಾವಿದ ಹೇಳಿಕೊಂಡಿದ್ದಾನೆ
ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ಉದ್ಘಾಟನೆ ಕಾಲ ಸನ್ನಿಹಿತವಾಗಿದೆ. ದೇಶದೆಲ್ಲೆಡೆ ಶ್ರೀರಾಮನ ಸ್ಮರಣೆ, ಭಜನೆ ಕೇಳಿಬರುತ್ತಿದೆ. ಹಿಂದೂಗಳ ಮನೆ ಮನದಲ್ಲಿ ಸಂಭ್ರಮ ತುಂಬಿದೆ. ಇದೇ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ (ಬಾಲರಾಮ) ಪ್ರಾಣ ಪ್ರತಿಷ್ಠೆ ಕೂಡ ಜರುಗಲಿದೆ. ಈ ದಿನಕ್ಕಾಗಿ ಕೋಟ್ಯಂತರ ರಾಮಭಕ್ತರು ಕಾತರದಿಂದ ಕಾಯುತ್ತಿದ್ದಾರೆ.