ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 4 ಲಕ್ಷ ಸಬ್ಸಿಡಿಯನ್ನು ನೀಡುವ ಮೂಲಕ ರಾಜ್ಯದ ರೈತರಿಗೆ ಬೋರ್ವೆಲ್ ಕೊರಸಿಕೊಳ್ಳುವ ಅವಕಾಶವನ್ನು ನೀಡಿದೆ. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಸಹಾಯಧನ ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅರ್ಜಿಯನ್ನು ಕರೆದಿದೆ.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನ ವಯೋಮಿತಿಯು 18 ವರ್ಷ ಮೇಲ್ಪಟ್ಟಿರಬೇಕು.
- ಅಷ್ಟೇ ಅಲ್ಲದೆ ಅರ್ಜಿದಾರನು ಒಂದೇ ಸ್ಥಳದಲ್ಲಿ ಎರಡು ಎಕ್ಕರೆ ಅಥವಾ 5 ಎಕರೆ ಜಮೀನನ್ನು ಹೊಂದಿರಬೇಕು.
- ಜಮೀನನ್ನು ಹೊಂದಿರುವ ಸ್ಥಳದಲ್ಲಿ ಯಾವುದೇ ರೀತಿಯ ನೀರಾವರಿ ವ್ಯವಸ್ಥೆಯು ಆ ಜಮೀನಿಗೆ ಇರಬಾರದು.
- ಅಲ್ಲಿನ ನಿಗಮಕ್ಕೆ ಸಂಬಂಧಪಟ್ಟವರ ವರ್ಗಕ್ಕೆ ಮಾತ್ರ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ .
- ಅಷ್ಟೇ ಅಲ್ಲದೆ ಕೊಡಗು, ಉತ್ತರ ಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಮತ್ತು ಹಾಸನ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಎಕರೆ ಜಮೀನನ್ನು ಹೊಂದಿರಬೇಕು.
- ಅಷ್ಟೇ ಅಲ್ಲದೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇರಬೇಕುಗಂಗಾ ಕಲ್ಯಾಣ ಯೋಜನೆಗೆ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?
- ಅರ್ಜಿದಾರನ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಸ್ವಂತ ಜಮೀನಿನ ಪಹಣಿ
- ಅರ್ಜಿದಾರನ ಭಾವಚಿತ್ರ
- BPL ರೇಷನ್ ಕಾರ್ಡ್
- ಮೊಬೈಲ್ ಸಂಖ್ಯೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆ ದಿನಾಂಕವಾಗಿದೆ. ಆದ್ದರಿಂದ ಯಾರೆಲ್ಲ ಅರ್ಜಿ ಸಲ್ಲಿಸಬೇಕೆಂದು ಕೊಂಡಿದ್ದೀರಾ. ಅವರು ಬೇಗನೆ ಅರ್ಜಿ ಸಲ್ಲಿಸಿ.
ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಮತ್ತು ಸೈಬರ್ ಸೆಂಟರ್ ಗಳಲ್ಲಿ ಭೇಟಿಯನ್ನು ನೀಡಿ. ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ