ಸಾಮಾನ್ಯವಾಗಿ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಇನ್ನಿತರ ವಿಧಾನದ ಪ್ರಯಾಣಕ್ಕೆ ಹೋಲಿಸಿದರೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಪ್ರಯಾಣಕ್ಕಾಗಿ ಜನರು ಮೊದಲು ರೈಲು ಪ್ರಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಇನ್ನು ರೈಲುಗಳಲ್ಲಿ ಕೂಡ ಪ್ರಯಾಣಿಕರಿಗಾಗಿಗೇ ಸಾಕಷ್ಟು ಅನುಕೂಲವಿರುತ್ತದೆ.
ರೈಲ್ವೆ ಇಲಾಖೆಯು ಪ್ರಯಾಣಿಕರಿಗೆಂದೇ ಹಲವು ಸೌಲಭ್ಯವನ್ನು ನೀಡಿರುತ್ತದೆ. ಸದ್ಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ರೈಲಿನಲ್ಲಿ ಪ್ರಯಾಣ ಮಾಡುವವರಿಗಾಗಿ ರೈಲ್ವೆ ಇಲಾಖೆ ಸದ್ಯ ಟಿಕೆಟ್ ಬುಕಿಂಗ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ರೈಲು ಸಂಚಾರ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಕಾರಣ ಟ್ರಾಫಿಕ್ ದಟ್ಟಣೆ, ನಿಲ್ಲಲು ಸ್ಥಳವಿಲ್ಲ ಎನ್ನುವಷ್ಟು ಪ್ರಯಾಣಿಕರು, ಬುಕ್ಕಿಂಗ್ ಮಾಡಿದರೆ ವೇಟಿಂಗ್ ಲಿಸ್ಟ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ರೈಲ್ವೆ ಮುಂದಾಗಿದೆ.
ಸದ್ಯ ಭಾರತೀಯ ರೈಲ್ವೇ ಪ್ರಮುಖ ಬದಲಾವಣೆಗಳಿಗೆ ಒಳಗಾಗುತ್ತಿದೆ. ಬುಕ್ ಮಾಡಿದವರಿಗೆ ತಕ್ಷಣ ಟಿಕೆಟ್ ಕನ್ನರ್ಮೇಷನ್ ನೀಡಲು ಇಲಾಖೆ ನಿರ್ಧರಿಸಿದೆ. ವೇಟಿಂಗ್ ಲಿಸ್ಟ್ ಗಾಗಿ ಕಾಯುವ ಅಗತ್ಯವಿಲ್ಲ. ಇದರಿಂದ ಪ್ರಯಾಣಿಕರ ಪ್ರಯಾಣವೂ ಸರಳ ಮತ್ತು ಆರಾಮದಾಯಕವಾಗಲಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಇನ್ನುಮುಂದೆ ಟಿಕೆಟ್ ಬುಕಿಂಗ್ ನಲ್ಲಿ ವೈಟಿಂಗ್ ಲಿಸ್ಟ್ ಇರಲ್ಲ
ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ರೈಲುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಭಾರತದ ಮೂಲೆ ಮೂಲೆಗೂ ರೈಲು ಸೇವೆಗಳನ್ನು ಒದಗಿಸಲಾಗಿದೆ ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಚಿವರು ರೈಲ್ವೇ ಇಲಾಖೆಯ ಅಧಿಕಾರಿಗಳು, ಶಿಸ್ತು ಮತ್ತು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಉನ್ನತ ಮಟ್ಟದ ಸಭೆ ನಡೆಸಿದರು.
ಕೆಲಸ, ಕರ್ತವ್ಯ ನಿರ್ಲಕ್ಷ್ಯ ಮಾಡಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ರೈಲಿನಲ್ಲಿ ನೀಡುವ ಆಹಾರ, ರೈಲಿನ ಸ್ವಚ್ಛತೆ, ಶೌಚಾಲಯ, ನೀರು, ಎಸಿ, ಫ್ಯಾನ್ ಪರಿಶೀಲಿಸಬೇಕು. ರೈಲು ಸಮಯ ವಿಳಂಬವಾಗಬಾರದು. ರೈಲು ಸಮಯಕ್ಕೆ ಸರಿಯಾಗಿ ಹೊರಡಬೇಕು. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ